ಸಿನಿಮಾ ಸುದ್ದಿ

ಪುಷ್ಪಕ ವಿಮಾನದ ಬೆನ್ನು ಬಿದ್ದ ರಮೇಶ್ !

ramesh-aravind-6

ಭಾರತೀಯ ಸಿನಿಮಾ ಅಂಗಳದಲ್ಲಿ ಟಾಕಿ ಜಮಾನಾದಲ್ಲೂ ಮೂಕಿ ಚಿತ್ರ ಮಾಡಿ ಗೆದ್ದು ಬಂದ ಪುಷ್ಪಕ ವಿಮಾನ ಮತ್ತೆ ಹೊಸ ಫಾರ್ಮೆಟ್‌ನಲ್ಲಿ ಬರುವ ಸೂಚನೆ ಗಾಂಧಿನಗರದ ಅಡ್ಡೆಯಿಂದ ಜೋರಾಗಿ ಕೇಳಿಸಿಕೊಂಡು ಬಂದಿದೆ.

ಅಂದಹಾಗೆ ಕಮಲ್ ಹಾಸನ್ ನಟಿಸಿದ ಪುಷ್ಪಕ ವಿಮಾನ ಚಿತ್ರ ಬಿಡುಗಡೆಯಾಗಿ ಬರೋಬರಿ ೨೯ ವರ್ಷಗಳೇ ಉರುಳಿ ಹೋಗಿದೆ. ಈಗ ಇದೇ ಹೆಸರಿನ ಚಿತ್ರವನ್ನು ಮಾಡಲು ರಮೇಶ್ ಅರವಿಂದ್ ಮುಂದೆ ಬಂದು ನಿಂತಿದ್ದಾರೆ. ಅದೂ ಕೂಡ ಕನ್ನಡ ಭಾಷೆಯಲ್ಲಿ ಎನ್ನೋದು ಮತ್ತೊಂದು ಖುಷಿಯ ವಿಷ್ಯಾ. ನಿರ್ದೇಶಕರಾಗಿ ಎಸ್. ರವೀಂದ್ರನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಮಲ್ ಹಾಸನ್ ಗೆಳೆಯ ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೊದಲಿನ ಪುಷ್ಪಕ ವಿಮಾನಕ್ಕೂ ಈ ಚಿತ್ರಕ್ಕೂ ಎಲ್ಲಿಯೂ ಸಂಬಂಧ ಕಲ್ಪಿಸಿಲ್ಲ. ಆದರೆ ಚಿತ್ರದಲ್ಲಿ ನಾಯಕನಿಗೆ ವಿಮಾನಗಳ ಕುರಿತು ಕ್ರೇಜ್ ಇರುವುದರಿಂದ ಸಿನಿಮಾಕ್ಕೆ ಈ ಹೆಸರನ್ನು ಇಡುವ ಪ್ರಯತ್ನ ಮಾಡಿದ್ದಾರೆ.