ಪ್ರವಾಸ

ಕೇವಲ ಒಂದು ಹುಡುಗಿಗಾಗಿ ಈ ಊರಲ್ಲಿ ರೈಲು ಓಡುತ್ತೆ

ರೈಲ್ವೇ ಸ್ಟೇಶನ್‌ ಬಂದ್‌ ಮಾಡುವ ಸಂದರ್ಭ ಬಂದಿತ್ತು :

ಜಪಾನ್‌ನ ನಾರ್ತ್‌ ಐಲ್ಯಾಂಡ್‌ ಹೋಕಾಯಿದೋದಲ್ಲಿ ಕಾಮಿ ಶಿರಾತಾಕಿ ಹೆಸರಿನ ಗ್ರಾಮವಿದೆ. ಅಲ್ಲಿನ ಜನಸಂಖ್ಯೆ ತುಂಬಾ ಕಡಿಮೆ. ಆದುದರಿಂದ ಜಪಾನ್‌ ಸರ್ಕಾರ ಮೂರು ವರ್ಷದ ಹಿಂದೆ  ರೈಲು ಸಂಚಾರವನ್ನೇ ಸ್ಥಗಿತ ಮಾಡುವ ಯೋಚನೆ ಮಾಡಿದರು. ಇದು ತುಂಬಾ ಇಂಟೀರಿಯರ್‌ ಜಾಗವಾದ್ದರಿಂದ ಸ್ಟೇಶನ್‌ ಬಂದ್‌ ಮಾಡುವ ಆರ್ಡರ್‌ ಸಹ ನೀಡಲಾಯಿತು. ಆದರೆ ಮೂಲಗಳಿಂದ ಅವರಿಗೆ ತಿಳಿದು ಬಂದ ವಿಷಯ ಎಂದರೆ ಒಬ್ಬಳು ಬಾಲಕಿ ಈ ಟ್ರೈನ್‌ ಮೂಲಕ ರೆಗ್ಯುಲರ್‌ ಆಗಿ ಸ್ಕೂಲ್‌ಗೆ ಹೋಗಿ ಬರುತ್ತಾಳೆ ಎಂದು. ಇದನ್ನು ನೋಡಿ ರೈಲ್ವೆ ಇಲಾಖೆ ಇಂದು ಸಹ ಆ ಟ್ರೈನ್‌ ಓಡಿಸುತ್ತಿದೆ.

ಗ್ರ್ಯಾಜುಯೇಶನ್‌ ಪೂರ್ಣಗೊಳ್ಳೋದು ಮುಖ್ಯ

ವರದಿ ಅನುಸಾರ ಪ್ರತಿದಿನ ಎರಡು ಟ್ರೈನ್‌ಗಳು ಇಲ್ಲಿ ಓಡಾಡುತ್ತದೆ. ಒಂದು ಟ್ರೈನ್‌ ಆಕೆಯನ್ನು ಸ್ಕೂಲ್‌ಗೆ ಬಿಡಲು ಓಡಿದರೆ ಮತ್ತೊಂದು ಸ್ಕೂಲ್‌ನಿಂದ ಮನೆಗೆ ಬಿಡುವ ಸಲುವಾಗಿ ಓಡುತ್ತೆ. ಅಷ್ಟೇ ಅಲ್ಲಾ ಈ ಟ್ರೈನ್‌ ಸಮಯವನ್ನು ಸ್ಕೂಲ್‌ ಆರಂಭವಾಗುವ, ಬಿಡುವ ಸಮಯಕ್ಕೆ ಅನುಗುಣವಾಗಿ ಬದಲಾಯಿಸಲಾಯಿತು. ಜಪಾನ್‌ ಸರ್ಕಾರ ಬಾಲಕಿಯ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಎಲ್ಲಿವರೆಗೆ ಆಕೆಯ ಗ್ರಾಜುಯೇಶನ್‌ ಪೂರ್ತಿಗೊಳ್ಳುವವರೆಗೆ ಅಲ್ಲಿವರೆಗೆ ಈ ಟ್ರೈನ್‌ ಓಡುತ್ತಿರುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿತು. ಇದೇ ಮಾರ್ಚ್‌ 2016ಕ್ಕೆ ಈ ಬಾಲಕಿಯ ಶಿಕ್ಷಣ ಪೂರ್ತಿಗೊಳ್ಳುತ್ತದೆಯಂತೆ.