ಅಡುಗೆ ಮನೆ

ಚಳಿಗಾಲದಲ್ಲಿ ಸಿಹಿಗೆಣಸಿನ ಮೋಡಿ !

ಸಿಹಿ ಗೆಣಸು ಹೃದಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳು ಕೂಡ ಮಿತಿಯಲ್ಲಿ ತಿನ್ನಬಹುದು. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನೆ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಎನ್ನುವುದು ಅಧ್ಯಯನಕಾರರು ತಿಳಿಸಿಕೊಟ್ಟಿರುವ ಮಾಹಿತಿ.
ಸಿಹಿ ಗೆಣಸು ಆಹಾರದಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ವ್ಯಾಯಾಮದ ನಂತರ, ದೇಹದ ಗ್ಲೈಕೋಜೆನ್ ಮಟ್ಟ ಕಡಿಮೆಯಾಗಲ್ಪಡುತ್ತದೆ, ಮತ್ತು ಸಿಹಿ ಗೆಣಸು, ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ.
ಹೆಚ್ಚು ಪೌಷ್ಟಿಕಾಂಶ ಇರುವುದರಿಂದ ದೇಶದ ಆಹಾರ ಸುರಕ್ಷತೆಗೆ, ಈ ಗೆಡ್ಡೆ ಸಹಕಾರಿಯಾಗ ಬಲ್ಲದು. ೧೦೦ ಗ್ರಾಂ ಗೆಡ್ಡೆಯಲ್ಲಿ ೪.೨ಗ್ರಾಂ ನಷ್ಟು ಸಕ್ಕರೆ ಅಂಶ, ಜೀವಸತ್ವಗಳಾದ ‘ಎ’ ‘ಸಿ’ ಮತ್ತು ಬಿ ೬, ಹೆಚ್ಚಾಗಿ ಇರುವುದೇ ಇದರ ಪ್ರಾಮುಖ್ಯತೆಗೆ ಕಾರಣ. ಅಂದಹಾಗೆ ಸಿಹಿ ಗೆಣಸು ಪುಷ್ಟಿದಾಯಕ ಆಹಾರ. ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು ಇಲ್ಲವೇ ಕೆಂಡದ ಮೇಲೆ ಸುಟ್ಟು ತಿಂದರೂ ಬಲು ರುಚಿಕರ. ಇದರಿಂದ ಅನೇಕ ರೀತಿಯ ಅಡುಗೆಗಳನ್ನು ತಯಾರಿಸಬಹುದು.