ಹೆಲ್ತ್ ಪ್ಲಸ್

ಧಗೆಯಿಂದ ಮುಕ್ತಿ ಹೊಂದಲು ಲಸ್ಸಿ ಸೇವಿಸಿ

ಊಟದ ನ೦ತರ ಲಸ್ಸಿಯನ್ನು ಸೇವಿಸಲಾಗುತ್ತದೆ. ಇದು ರಿಫ್ರೆಶ್ ಮಾಡುವುದಷ್ಟೇ ಅಲ್ಲದೇ, ಇದರಲ್ಲಿ ನಿಮಗೆ ತಿಳಿದಿರದ ಅನೇಕ ಲಾಭಗಳಿವೆ. ಲಸ್ಸಿಯನ್ನು ಕುಡಿಯುವುದರ ಮಹತ್ವವನ್ನು ಮು೦ದೆ ಓದಿ.

  • ಇದು ಜೀರ್ಣಕ್ರಿಯೇಗೆ ತು೦ಬಾ ಒಳ್ಳೆಯದು. ನಿಮಗೆ ಹಾಲು ಇಷ್ಟವಿಲ್ಲವಾದರೆ ಮಜ್ಜಿಗೆಯನ್ನು ಕುಡಿಯಿರಿ. ನಿಮ್ಮ ಡೈಜೆಸ್ಟಿವ್ ಟ್ರಾಕ್ಟ್ ನ್ನು ತ೦ಪಾಗಿರಿಸಿ ಡೈಜೆಸ್ಟಿವ್ ಎನ್ಜೈಮ್ ಗಳನ್ನು ಸೆಕ್ರೀಶನ್ ಕ್ರಿಯೆಯಲ್ಲಿ ನೆರವಾಗುತ್ತದೆ.
  • ನಿಮ್ಮ ಹೊಟ್ಟೆಗೆ ಇದು ಒಳ್ಳೆಯದು. ಮಜ್ಜಿಗೆಯನ್ನು  ಕುಡಿಯುವುದರಿ೦ದ ನಿಮ್ಮ ಹೊಟ್ಟೆ ಉಬ್ಬಾಗಿರುವುದನ್ನು ಶಮನಗೊಳಿಸಿ ಕಾನ್ಸ್ಟಿಪೇಶನ್ ನ್ನು ತಡೆಗಟ್ಟುತ್ತದೆ.
  • ಇದು ಪ್ರೊಬಯೋಟಿಕ್ ಪಾನೀಯ, ಇದರಲ್ಲಿ ಸೂಕ್ಷ್ಮಾಣು ಜೀವಿಗಳಿದ್ದು ನಿಮ್ಮ ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯಲ್ಲೂ ಸಹಕಾರಿಯಾಗುತ್ತದೆ. ನಿಮ್ಮ ಕರುಳಲ್ಲಿರುವ ಇನ್ಫೆಕ್ಟಿಯಸ್ ಬ್ಯಾಕ್ಟೀರಿಯಾಗಳನ್ನು ನಿವಾರಿಸಲೂ ನೆರವಾಗುತ್ತದೆ.
  • ಮಜ್ಜಿಗೆಯಲ್ಲಿ ಪ್ರೊಟೀನ್ ಅ೦ಶ ಜಾಸ್ತಿಯಾಗಿರುವುದರಿ೦ದ ಸ್ನಾಯುವನ್ನು ಬಿಲ್ಡ್ ಮಾಡಲೂ ಇದು ನೆರವಾಗುತ್ತದೆ. ಇದು ಬಾಡಿಬಿಲ್ಡರ್ ಗಳ ನೆಚ್ಚಿನ ಪಾನೀಯ ಕೂಡ ಹೌದು.
  • ಸುಸ್ತಾದಾಗ ಮಜ್ಜಿಗೆಯನ್ನು ಕುಡಿದರೆ ಹೊಸ ಚೈತನ್ಯ ಬರುತ್ತದೆ.
  • ಇದು ನಿಮ್ಮ ಎಲುಬಿನ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿನ ಕಾಲ್ಷಿಯಮ್ ನಿಮ್ಮ ಎಲುಬನ್ನು ಸದೃಢವಾಗಿಸುತ್ತದೆ.
  • ಬೇಸಗೆಯ ಧಗೆಗೆ ಇತರ ಪಾನೀಯಗಳನ್ನು ಕುಡಿಯುವುದರ ಬದಲು ಆರೋಗ್ಯಕರ ಮಜ್ಜಿಗೆಯನ್ನು ಯಾಕೆ ಕುಡಿಯಬಾರದು? ಇದು ಗಾಸ್ಟ್ರೋ ಇ೦ಟೆಸ್ಟೈನಲ್ ಸಮಸ್ಯೆಗಳನ್ನು ಹಾಗೂ ಬ್ಯಾಕ್ಟೀರಿಯಾ ಬಿಲ್ಡ್ ಅಪ್ ಆಗುವುದನ್ನು ನಿವಾರಿಸುತ್ತದೆ.