ಪ್ರವಾಸ

ಪ್ರವಾಸಕ್ಕೆ ಹೋಗೋ ಗರ್ಲ್ಸ್‌ ಗ್ಯಾಂಗ್‌ಗೆ ಟ್ರಾವೆಲ್‌ ಟಿಪ್ಸ್‌

ಆದಾಗ್ಯೂ, ಇಂತಹ ಪ್ರವಾಸದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು, ಮತ್ತು ಸಂಭವನೀಯ ಅಪಾಯಗಳ ವಿರುದ್ಧ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತೀ ಅಗತ್ಯ.

ಸಾಮಾನ್ಯವಾಗಿ ನಾವು ಭೇಟಿ ನೀಡಲಿರುವ ಪ್ರದೇಶಗಳ ಕುರಿತು ಗೂಗಲ್ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಆದರೆ, ಸುರಕ್ಷತೆಯ ದೃಷ್ಟಿಯಲ್ಲಿ ನೋಡಿದಾಗ ಅಷ್ಟು ಮಾತ್ರ ಮಾಹಿತಿ ಸಾಕಾಗುವುದಿಲ್ಲ. ಏಕೆಂದರೆ, ಅಂತರ್ಜಾಲ ಮತ್ತು ಪ್ರವಾಸಿ ಗೈಡ್‌ಗಳಲ್ಲಿ  ಕಂಡುಬರುವ ಸ್ಥಳಗಳು ಸಾಕಷ್ಟು ದೂರದಲ್ಲಿರಬಹುದು. ಸಂಜೆಯ ವೇಳೆಗೆ ಇಂತಹ ಸ್ಥಳಗಳು ನಿರ್ಜನವಾಗುವುದರಿಂದ, ನಾವು ಅಲ್ಲಿಗೆ ತಲುಪುವ ಸಮಯವನ್ನು ಎಚ್ಚರಿಕೆಯಿಂದ ಯೋಜಿಸಬೇಕು. ಆ ಪ್ರವಾಸಿ ತಾಣದಲ್ಲಿ ಹೆಚ್ಚು ಜನರಿರುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಿಗೆ ಹೋಗುವುದು ಎನ್ನುವ ಬದಲಿಗೆ, ಎಲ್ಲಿಗೆ ಹೋಗಬಾರದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಕೆಲವು ಸ್ಥಳಗಳು ಕಳ್ಳಕಾಕರಿಗೆ ಸ್ವರ್ಗದಂತಿರುತ್ತವೆ. ಅಂತಹ ಸ್ಥಳಗಳ ಸಮೀಪ ಕೂಡ ಹೋಗದೇ ಇರುವುದು ಉತ್ತಮ. ನೀವು ಭೇಟಿ ನೀಡಲು ಯೋಜಿಸಿರುವ ಸ್ಥಳಗಳಿಗೆ, ನಿಮ್ಮ ಸ್ನೇಹಿತರು ಈಗಾಗಲೇ ಹೋಗಿದ್ದರೆ, ನೀವು ಅವರಿಂದ ಮಾಹಿತಿ ಸಂಗ್ರಹಿಸಬಹುದು. ನಿಮ್ಮ ಉದ್ದೇಶಿತ ಭೇಟಿ ಸ್ಥಳಗಳ ಬಳಿ ನಿಮ್ಮ ಸ್ನೇಹಿತರಿದ್ದರೆ, ಅವರಿಂದಲೂ ಮಾಹಿತಿ ಸಂಗ್ರಹಿಸಿ! ನೀವು ಉಳಿದುಕೊಳ್ಳುವ ಹೋಟೆಲ್‌ಗಳಲ್ಲೂ ಸಹ ನಿಮಗೆ ಈ ಕುರಿತು ಮಾಹಿತಿ ಸಿಗುತ್ತದೆ.

ನೀವು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ, ನೀವು ಪ್ರವಾಸಿ ಎಂಬುದನ್ನು ಸ್ಪಷ್ಚವಾಗಿ ತೋರಿಸುವಂತೆ ವರ್ತಿಸಬೇಡಿ. ಸದಾಕಾಲ ಕ್ಯಾಮೆರಾ ಮತ್ತು ನಕ್ಷೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಸರಿಯಲ್ಲ. ಅವುಗಳ ಅಗತ್ಯವಿಲ್ಲದಾಗ, ಅವುಗಳನ್ನು.ಚೀಲದೊಳಗೆ ಇರಿಸಿ. ಸಾಧ್ಯವಾದರೆ, ಸ್ಥಳೀಯ ಹುಡುಗಿಯರಂತೆ ಉಡುಗೆ ಧರಿಸಿ. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೀವು ಇತರ ಅನಗತ್ಯ ಕುತೂಹಲಕ್ಕೆ ಕಾರಣವಾಗುವುದು ತಪ್ಪುತ್ತದೆ. ಒಂದು ಪ್ರವಾಸಿ ಸ್ಥಳದಲ್ಲಿ ಅಲೆದಾಡುವಾಗ, ನಿಮ್ಮದೇ ಆದ ಮಿತಿಯೊಂದನ್ನು ಗುರುತಿಸಿಕೊಳ್ಳಿ. ನೀವು ಭೇಟಿ ನೀಡಲು ಬಯಸಿರುವ ಅಥವಾ ಫೋಟೋ ತೆಗೆದುಕೊಳ್ಳಲು ಬಯಸುವ ಸ್ಥಳಗಳಿಗೆ ಮಾತ್ರ ಭೇಟಿ ನೀಡಿ. ಆಸಕ್ತಿದಾಯಕವಾಗಿ ಕಂಡಿತು ಎಂದ ಮಾತ್ರಕ್ಕೆ ಸುಮ್ಮನೆ ಮುಂದಕ್ಕೆ ಹೋಗಬೇಡಿ. ಏಕೆಂದರೆ, ನೀವು ದಾರಿ ತಪ್ಪುವ ಎಲ್ಲಾ ಅಪಾಯವಿರುತ್ತದೆ.

ನಿಮ್ಮ ಎಲ್ಲಾ ದಾಖಲೆಗಳನ್ನು – ಐಡಿ ಕಾರ್ಡ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮತ್ತು ಯಾವುದೇ ಇತರ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ನಿಮಗೇ ಮೇಲ್ ಮಾಡಿಕೊಳ್ಳಿ. ಮತ್ತು ನಿಮ್ಮ ಡ್ರಾಪ್ ಬಾಕ್ಸ್‌ಗೆ ಅವುಗಳನ್ನು ಕಳುಹಿಸಿಕೊಳ್ಳಿ. ನಿಮ್ಮ ಚೀಲ ಮತ್ತು ಇತರ ಸಾಮಾನು ಕಳೆದುಹೋದ ಸಂದರ್ಭದಲ್ಲಿ ಇವು ಸಹಾಯಕ್ಕೆ ಬರುತ್ತವೆ. ನಿಮ್ಮ ಹೋಟೆಲ್ ದೂರವಾಣಿ ಸಂಖ್ಯೆ ಮತ್ತು ಸ್ಥಳೀಯ ಪೊಲೀಸ್ ತುರ್ತು ದೂರವಾಣಿ ಸಂಖ್ಯೆಗಳು ಸುಲಭವಾಗಿ ಸಿಗುವಂತೆ ಇರಿಸಿಕೊಳ್ಳಿ. ಮರೆಯಬೇಡಿ!