ಪ್ರವಾಸ

ಪ್ರವಾಸ ಪ್ರಯಾಸವಾಗದಿರಲು ಕೈಗೊಳ್ಳಬೇಕಾದ ಮುಂಜಾಗ್ರತೆ

ಯಾವಾಗಲೂ ಪ್ರವಾಸದ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಮತ್ತು ಆರಾಮಗಳೇ ಆದ್ಯತೆಯ ವಿಚಾರಗಳಾಗಿರಬೇಕು. ಹೀಗಾಗಿ ಮುಖ್ಯವಾಗಿ ಪ್ರವಾಸದ ಅವಧಿಯಲ್ಲಿ ಮೂಲಭೂತ ಅಂಶಗಳಾದ ನೀರು ಮತ್ತು ಆಹಾರದ ಬಗ್ಗೆ ಸಾಕಷ್ಟು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಇಂತಹ ಸಂದರ್ಭದಲ್ಲಿ ಯಾವೆಲ್ಲಾ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಒಂದಿಷ್ಟು ಟಿಪ್ಸ್ ಇಲ್ಲಿದೆ.

ನಿಮಗೇನು ಒಳ್ಳೆಯದು

  • ಹಣ್ಣು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಇಟ್ಟುಕೊಂಡರೆ ಅದರಷ್ಟು ಉತ್ತಮ ಕೆಲಸ ಮತ್ತೊಂದಿಲ್ಲ.
  • ಆಹಾರವನ್ನು ಚೆನ್ನಾಗಿ ಬೇಯಿಸುವುದರಿಂದ ಅದರಲ್ಲಿರಬಹುದಾದ ಬಹುತೇಕ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಹೀಗಾಗಿ-ಯಾವಾಗಲೂ ಸರಿಯಾಗಿ ಬೇಯಿಸಿದ ಮತ್ತು ಬಿಸಿಯಾಗಿರುವ ಅಡುಗೆಗೆ ಆದ್ಯತೆ ನೀಡಿ.
  • ನೀರು, ಸೋಡಾ, ಹಣ್ಣಿನ ರಸ ಅಥವಾ ಆಲ್ಕೋಹಾಲ್ ಆಗಿರಲಿ ಯಾವಾಗಲೂ ಸೀಲ್ ಮಾಡಿ ಬಾಟಲ್ ಅಥವಾ ಕ್ಯಾನ್ ಅನ್ನೇ ಬಳಸಿ.

ಯಾವುದು ಒಳ್ಳೆಯದಲ್ಲ

 

  • ಬೇಯಿಸದ ತರಕಾರಿ ಅಂದರೆ ಸಲಾಡ್, ಸಲ್ಸಾ ಮೊದಲಾದವುಗಳಿಗೆ ನಿಮ್ಮ ಆಹಾರದ ಪಟ್ಟಿಯಲ್ಲಿ ಸ್ಥಾನ ನೀಡಲೇಬೇಡಿ. ಯಾಕೆಂದರೆ ಇಂತಹ ಕಚ್ಚಾ ಆಹಾರ ವಸ್ತುಗಳ ಮೂಲ ಯಾವುದು ಎಂಬುದು ನಿಮಗೆ ತಿಳಿದಿರುವುದಿಲ್ಲ. ಹೀಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಮನೆ ಮಾಡಿರುವ ಅಪಾಯ ಸದಾ ಇರುತ್ತದೆ.
  • ಬೀದಿ ಬದಿಯ ವ್ಯಾಪಾರಿಗಳಿಂದ ಆಹಾರ ಅಥವಾ ತಿನಿಸು ಖರೀದಿಸುವುದನ್ನು ತಪ್ಪಿಸಿಕೊಳ್ಳಿ. ರಜಾ ದಿನಗಳಲ್ಲಿ ಹೋಗುವ ಪ್ರದೇಶಗಳಲ್ಲಿ ಸ್ಥಳೀಯರು ಮಾಡುವ ಆಹಾರ ವಸ್ತುಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ. ಯಾಕೆಂದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ಏನು ಸಮಸ್ಯೆಯಾಗಬಹುದು ಎಂಬ ಅರಿವು ನಿಮಗಿರುವುದಿಲ್ಲ.
  •  ಪ್ರವಾಸಿಗರಾಗಿ ಹೋದ ಕಡೆಯಲ್ಲೆಲ್ಲಾ ಸಿಗುವ ಬೀದಿ ಆಹಾರ ವಸ್ತುಗಳನ್ನು ಅರಗಿಸಿಕೊಳ್ಳಲು ನಿಮ್ಮ ಜೀರ್ಣಾಂಗ ವ್ಯೂಹ ವಿಫಲವಾಗಬಹುದು. ಹೀಗಾಗಿ ಅಂತಹ ತಿನಿಸುಗಳನ್ನು ತಪ್ಪಿಸಿಕೊಳ್ಳುವುದು ಯಾವಾಗಲೂ ಉತ್ತಮ.

ಈ ಸಲಹೆಗಳನ್ನು ಪಾಲಿಸುವ ಮೂಲಕ ಪ್ರವಾಸ ಸುಖಕರವಾಗಿರುವಂತೆ ನೋಡಿಕೊಳ್ಳಿ.