ಹೆಲ್ತ್ ಪ್ಲಸ್

ಸುಖ ನಿದ್ರೆಗೆ ಪಾಲಿಸಿ ಉತ್ತಮ ವಿಧಾನ

ಒಮ್ಮೆ ಎಚ್ಚರಗೊಂಡ ಬಳಿಕ ಹಿಂದಕ್ಕೆ 90 ನಿಮಿಷಗಳನ್ನು ಲೆಕ್ಕ ಹಾಕಿ. ಹಾಗೆ ಹಿಂದಕ್ಕೆ ಲೆಕ್ಕ ಹಾಕುತ್ತಾ ಹೋಗಿ. ಒಟ್ಟು ನೀವು 90 ನಿಮಿಷಗಳ ಲೆಕ್ಕದಲ್ಲಿ 5 ಪಟ್ಟು ನಿದ್ರಿಸಿದ್ದೀರಾ ಎಂದು ಕಂಡುಕೊಳ್ಳಿ. ಉದಾಹರಣೆಗೆ ಬೆಳಗ್ಗೆ 8 ಗಂಟೆಗೆ ಎದ್ದರೆ ಅದರ ಹಿಂದೆ 90 ನಿಮಿಷ ಅಂದರೆ 6.30, 5.00, 3.30, 2.00, 12.00 ಮತ್ತು ಒಂದು ಗಂಟೆ ಹೀಗೆ ಲೆಕ್ಕ ಹಾಕುತ್ತಾ ಹೋಗಿ. ಆಗ ನೀವು ರಾತ್ರಿ 11 ಗಂಟೆಯಿಂದ 12.30ರೊಳಗೆ ನಿದ್ರಿಸಿದ್ದೀರಿ ಎಂದರ್ಥ.

ಇದು ಯಾಕೆ ?
ನಿದ್ರೆಯಲ್ಲಿ ಎರಡು ಹಂತಗಳಿವೆ. ಒಂದು ಆರ್‌ಇಎಂ (ರ‍್ಯಾಪಿಡ್ ಐ ಮೂವ್‌ಮೆಂಟ) ಮತ್ತು ಇನ್ನೊಂದು ನಾನ್‌ಆರ್‌ಇಎಂ. ಗಾಢ ನಿದ್ರೆಯ ಸಮಯಲ್ಲಿ ನಾಲ್ಕು ಆರ್‌ಇಎಂ ಮತ್ತು ಒಂದು ನಾನ್‌ಆರ್‌ಇಎಂ ಇರುತ್ತದೆ.  ಇದರ ಪ್ರತಿ ಹಂತದ ಅವಧಿ 90 ನಿಮಿಷಗಳು. 11/12 ಪ್ರತಿ ಹಂತದ ಬಳಿಕ ಸ್ವಲ್ಪ ಅಂತರವಿರುತ್ತದೆ.

ನಾವು ಈ ಮಧ್ಯದ ಅವಧಿಯಲ್ಲಿ ಎಚ್ಚರವಾದರೆ ಅದು ಸರಿ. ಆದರೆ ಈ ಹಂತಗಳ ಮಧ್ಯೆ ಎಚ್ಚರವಾದರೆ ಅರಾಮವೆನಿಸದೆ ಕಿರಿಕಿರಿ ಮನೋಭಾವ ಮೂಡುತ್ತದೆ.

ಇದು ತೀರಾ ಚಿಕ್ಕ ವಿಷಯ ಎನಿಸಬಹುದು. ಉದಾಹರಣೆಗೆ ರಾತ್ರಿಯೆಲ್ಲಾ ಕೆಲಸ ಮಾಡಿ ರಾತ್ರಿ 12 ಗಂಟೆಗೆ ನಿದ್ರೆಗೆ ಜಾರಿ ಬೆಳಗ್ಗೆ 8 ಗಂಟೆಗೆ ಮತ್ತೆ ಕಚೇರಿಗೆ ಹೋಗಬೇಕಾದ ಸನ್ನಿವೇಶವನ್ನು ಊಹಿಸಿಕೊಳ್ಳಿ. ಆಗ ಬೆಳಗ್ಗೆ 7.30ಕ್ಕೆ ಅಲಾರಾಂ ಇಟ್ಟುಕೊಳ್ಳಿ. ಇದರ ಅರ್ಥ ನೀವು ಆರು ಗಂಟೆಗೆ ಹಾಸಿಗೆಯಲ್ಲಿ ಮಲಗಿದರೂ 6.15ಕ್ಕೆ ನಿದ್ರೆಗೆ ಜಾರುತ್ತೀರಿ. 7.30ಕ್ಕೆ ಅಲಾರಾಂ ಇಡುವ ಮೂಲಕ 11/12 ಗಂಟೆಯ ಸರ್ಕಲ್ ಪೂರ್ಣಗೊಳ್ಳುತ್ತದೆ. 8 ಗಂಟೆಗೆ ಅಲಾರಾಂ ಇಟ್ಟರೆ ಅದು ಬೇರೆ ಸರ್ಕಲ್‌ಗಷ್ಟೇ ಹೊಂದುತ್ತದೆ. ಇದರಿಂದ 8 ಗಂಟೆಗೆ ಎದ್ದರೆ ಕಿರಿಕಿರಿ ಮನಸ್ಥಿತಿ ಎದುರಾಗುತ್ತದೆ.