ಎಜುಪ್ಲಸ್ ಜಾಬ್ ಜಂಕ್ಷನ್

ಮನೆಯಲ್ಲಿಯೇ ಉದ್ಯೋಗ ಹೊಸ ಬದುಕಿನ ಗೇಟ್ ವೇ

ದುಡಿಮೆ ಎಂದರೆ ಅದು ಬರೀ ಕಚೇರಿಯಲ್ಲಿ ಮಾಡಬೇಕಿಲ್ಲ ಎಲ್ಲಿ ಬೇಕಾದರೂ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಮನೆಯಲ್ಲಿ ಕೂತು ಮಾಡಿದರೂ ಕೂಡ ಅದು ದುಡಿಮೆ ಎನ್ನಿಸಿಕೊಳ್ಳುತ್ತದೆ. ಮುಖ್ಯವಾಗಿ ಇದೊಂದು ಪಾರ್ಟ್ ಟೈಮ್ ವೃತ್ತಿಯನ್ನಾಗಿ ಕೂಡ ಮಾಡಬಹುದು. ಕಚೇರಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಬಂದ ನಂತರ ಕೂಡ ಇಲ್ಲಿ ದುಡಿಯಲು ಅವಕಾಶವಿದೆ.

ಆಧುನಿಕ ಬದುಕಿನ ಶೈಲಿಗೆ ಇದೊಂದು ರೀತಿಯ ಬೂಸ್ಟ್‌ನಂತೆ ಕಾರ‍್ಯನಿರ್ವಹಿಸುತ್ತದೆ. ಇಂತಹ ಪಾರ್ಟ್ ಟೈಮ್ ವೃತ್ತಿಯಲ್ಲಿ ಪ್ರತಿಭೆಯ ಜತೆಗೆ ಕೌಶಲ್ಯತೆ ಕೂಡ ಇರಬೇಕಾಗುತ್ತದೆ. ತಮ್ಮ ಶೈಕ್ಷಣಿಕ ಆರ್ಹತೆ, ಜತೆಯಲ್ಲಿ ಕೆಲಸದ ಕುರಿತು ಬೆಳೆಸಿಕೊಂಡ ಆಸಕ್ತಿ ಎಲ್ಲವೂ ಈ ಪಾರ್ಟ್ ಟೈಮ್ ವೃತ್ತಿಯಲ್ಲಿ ಕೌಂಟ್ ಆಗುತ್ತದೆ.
ಮನೆಯಲ್ಲಿಯೇ ಕೂತು ಕೆಲಸ ಮಾಡುವುದರಲ್ಲಿ ಬಹಳಷ್ಟು ಪ್ಲಸ್ ಪಾಯಿಂಟ್‌ಗಳಿವೆ. ಮುಖ್ಯವಾಗಿ ಮನೆಯಲ್ಲಿಯೇ ಕೂತು ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಬಹುದು. ನಿಮ್ಮ ಮಕ್ಕಳ ಜತೆಯಲ್ಲಿ ಕಾಲ ಕಳೆಯುತ್ತಾ, ಕುಟುಂಬದ ಕೆಲಸ ನಿರ್ವಹಣೆ ಮಾಡುತ್ತಾ ಉಳಿದ ಸಮಯದಲ್ಲಿ ಈ ವೃತ್ತಿಯನ್ನು ಮಾಡಿಬಿಡಬಹುದು. ಮುಖ್ಯವಾಗಿ ಆಧುನಿಕ ತಂತ್ರಜ್ಞಾನದ ಅರಿವು ಈ ರೀತಿಯಲ್ಲಿ ಕೆಲಸ ಮಾಡುವವರಿಗೆ ಬೇಕಾಗುತ್ತದೆ. ಮುಖ್ಯವಾಗಿ ಆಧುನಿಕ ಬದುಕಿನಲ್ಲಿ ಆನ್‌ಲೈನ್ ವ್ಯವಸ್ಥೆಯ ಅರಿವು ಇದ್ದರಂತೂ ಪಾರ್ಟ್ ಟೈಮ್ ವೃತ್ತಿಗೆ ಲಯಾಕ್. ಕೆಲವೊಂದು ನಿಮ್ಮ ಹವ್ಯಾಸವೇ ನಿಮಗೆ ಗಳಿಕೆ ದಾರಿಯನ್ನು ಉಂಟು ಮಾಡಬಹುದು. ಉದಾ: ಜುವೆಲ್ಲರಿ ಮೇಕಿಂಗ್, ಕ್ರಾಪ್ಟ್ ಐಡಿಯಾಗಳು ಇತ್ಯಾದಿ. ಇಲ್ಲಿ ನಿಮಗೆ ನೀವೇ ಬಾಸ್ ಆಗಿ ಹೋಗುತ್ತೀರಿ ಎನ್ನುವ ವಿಚಾರವಂತೂ ನೆನಪಿನಲ್ಲಿಡಿ. ಅದರಲ್ಲೂ ಕೆಲವೊಂದು ಪಾರ್ಟ್ ಟೈಮ್ ಜಾಬ್ ಐಡಿಯಾಗಳು ಇಲ್ಲಿವೆ. ಜೋಪಾನವಾಗಿ ಆಯ್ಕೆ ಮಾಡಿಕೊಂಡು ನಿಮ್ಮ ಬದುಕಿನ ಗೇಟ್ ವೇಯನ್ನು ತೆರೆಯಿರಿ.
ಆನ್‌ಲೈನ್ ಸ್ಟೋರ್:
ಇದೊಂದು ಆಧುನಿಕ ವ್ಯವಸ್ಥೆಯಲ್ಲಿ ತೀರಾ ಮಹತ್ವ ಎಂದೇ ಬಿಂಬಿಸಲಾಗಿದೆ. ಮುಖ್ಯವಾಗಿ ಬಟ್ಟೆ ಮಾರಾಟ, ಸುಗಂದ ದ್ರವ್ಯ, ಪಾದರಕ್ಷೆ ಅಥವಾ ಯಾವುದೇ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಿಕೊಂಡು ಗಳಿಕೆ ಮಾಡಿಕೊಳ್ಳಬಹುದು. ಅಂದಹಾಗೆ ನಿಮ್ಮ ಗ್ರಾಹಕರು ಗ್ಲೋಬಲ್ ಲೆವೆಲ್‌ನಲ್ಲಿರುತ್ತಾರೆ ಎನ್ನುವ ವಿಚಾರವಂತೂ ನಿಮ್ಮ ಗಮನದಲ್ಲಿರಬೇಕಾಗುತ್ತದೆ.
ಆನ್‌ಲೈನ್ ಗೈಡೆನ್ಸ್:
ಇಲ್ಲಿ ಮುಖ್ಯವಾಗಿ ಆನ್‌ಲೈನ್‌ನಲ್ಲಿ ಕೂತುಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬಹುದು. ಮುಖ್ಯವಾಗಿ ಇಂಗ್ಲೀಷ್ ಗೊತ್ತಿದ್ದರಂತೂ ಇಂತಹ ಗೈಡೆನ್ಸ್ ವ್ಯವಸ್ಥೆಗೆ ನೀವು ಹೊಂದಿಕೊಳ್ಳುತ್ತೀರಿ. ಮುಖ್ಯವಾಗಿ ಆನ್‌ಲೈನ್ ಗೈಡೆನ್ಸ್ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗಂತೂ ವರದಾನ ಎಂದೇ ಪರಿಗಣಿತವಾಗಿದೆ.
* ಬ್ಲೋಗರ್:
ಆಧುನಿಕ ಕಾಲದಲ್ಲಿ ಬ್ಲೋಗ್ ವ್ಯವಸ್ಥೆಗೆ ಹೆಚ್ಚಿನ ಮಾನ್ಯತೆ ಇದೆ. ಒಂದು ವಿಚಾರದಲ್ಲಿ ಆಳವಾದ ಜ್ಞಾನ ಇದ್ದಾರಂತೂ ಒಳ್ಳೆಯ ಗಳಿಕೆ ಇಳಿಯಬಹುದು. ನಿಮ್ಮ ಬ್ಲೋಗ್ ನೋಡುಗಗರು ಹೆಚ್ಚಿದಂತೆ ಜಾಹೀರಾತು ಕೂಡ ಹರಿದು ಬರುತ್ತದೆ. ಗೂಗಲ್ ವ್ಯವಸ್ಥೆಯಂತೂ ಬಿಟ್ಟಿಯಾಗಿ ನಿಮಗೆ ಜಾಹೀರಾತು ನೀಡಿ ಕೈ ತುಂಬಾ ಹಣ ಕೊಡುತ್ತದೆ. ಇದರ ಜತೆಗೆ ಫ್ರಿಲ್ಸಾನ್ಸ್ ಬರಹಗಾರರಿಗೂ ಹಣ ಗಳಿಸಲು ಇದರಲ್ಲಿ ಒಳ್ಳೆಯ ಅವಕಾಶವಿದೆ. ತಾಂತ್ರಿಕ ಬರಹಗಾರರಿಗಂತೂ ಒಳ್ಳೆಯ ಹಣ ಕೊಟ್ಟು ದುಡಿಸುವ ಸಂಸ್ಥೆಗಳು ಬೇಕಾದಷ್ಟಿದೆ.
ಅನುವಾದಕರು:
ಇಂಗ್ಲೀಷ್‌ನಿಂದ ಇತರ ಭಾಷೆಗೆ ಅಥವಾ ಇತರ ಭಾಷೆಗಳಿಂದ ಇಂಗ್ಲೀಷ್‌ಗೆ ಒಳ್ಳೆಯ ರೀತಿಯಲ್ಲಿ ಅನುವಾದ ಮಾಡುವವರಿಗೆ ಸಾಕಷ್ಟು ಬೇಡಿಕೆ ಇದೆ. ಮುಖ್ಯವಾಗಿ ಮನೆಯಲ್ಲಿಯೇ ಕೂತು ಕೈ ತುಂಬಾ ಗಳಿಸುವವರು ಬಹಳಷ್ಟು ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಇದರ ಜತೆಯಲ್ಲಿ ವೆಬ್ ಡಿಸೈನ್ ಹಾಗೂ ಗ್ರಾಫಿಕ್ ಡಿಸೈನರ್‌ಗಳು ಕೂಡ ಆನ್‌ಲೈನ್ ವ್ಯವಸ್ಥೆಯನ್ನು ಬಳಸಿಕೊಂಡು ಕೈ ತುಂಬಾ ದುಡಿಯಬಹುದು.
ಪುಟಾಣಿ ಮಕ್ಕಳನ್ನು ನೋಡಿಕೊಳ್ಳುವುದು ಅದರಲ್ಲೂ ಮುಖ್ಯವಾಗಿ ನರ್ಸರಿಗಳನ್ನು ಆರಮಭ ಮಾಡಿಕೊಂಡು ಕೂಡ ಕೈ ತುಂಬಾ ದುಡಿಯುವ ಅವಕಾಶ ಇದೆ. ಸಂಗೀತ, ಕ್ರಾಪ್ಟಿಂಗ್, ನೃತ್ಯ, ಹೊಲಿಗೆ,ಕೇಟರಿಂಗ್, ತಿಂಡಿ ತಯಾರಿ, ಬ್ಯೂಟಿ ಪಾರ್ಲರ್, ವಧುವಿನ ಶೃಂಗಾರ, ವೆಡ್ಡಿಂಗ್ ಪ್ಲ್ಯಾನರ್, ಇವೆಂಟ್ ಪ್ಲ್ಯಾನರ್, ಕುಕ್ಕಿಂಗ್ ಕ್ಲಾಸ್, ನಾಯಿ ಸಾಕಣೆ, ಮೀನು ಸಾಕಣೆ, ಫಿಟ್‌ನೆಸ್ ಟ್ರೈನರ್, ಯೋಗ ತರಬೇತಿ ಎಲ್ಲವೂ ಮನೆಯಲ್ಲಿಯೇ ಕೂತು ಕೈ ತುಂಬಾ ಗಳಿಸಿಕೊಳ್ಳಬಹುದು. ಅಂದಹಾಗೆ ಇದಕ್ಕೆಲ್ಲ ದೊಡ್ಡ ದೊಡ್ಡ ಪದವಿಗಳು ಬೇಕಿಲ್ಲ, ದೊಡ್ಡ ದೊಡ್ಡ ಬಂಡವಾಳದ ಅಗತ್ಯನೂ ಇಲ್ಲ. ಬೇಕಿರೋದು ಬರೀ ಆಸಕ್ತಿ ಮಾತ್ರ ಎನ್ನುವ ವಿಚಾರ ನಿಮ್ಮ ಗಮನದಲ್ಲಿರಲಿ.