ವಾಣಿಜ್ಯ ಸುದ್ದಿ

ಬ್ಯಾಂಕ್ ಅಕೌಂಟ್ ಓಪನ್ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಕೇವಲ ಅಕೌಂಟ್ ಓಪನ್ ಮಾಡಲಿಕ್ಕಷ್ಟೇ ಅಲ್ಲ, 2 ಲಕ್ಷ ರೂ. ಮೌಲ್ಯದ ಚಿನ್ನ ಅಥವಾ ಆಭರಣ ಖರೀದಿಗೆ ಅಥವಾ ಯಾವುದಾದ್ರೂ ರೆಸ್ಟೋರೆಂಟ್‌ಗೆ 50 ಸಾವಿರ ರೂ. ಮೊತ್ತದ ಬಿಲ್ ಪಾವತಿಸಲಿಕ್ಕೂ ಪ್ಯಾನ್ ಕಡ್ಡಾಯ.

ಕಪ್ಪುಹಣ ಚಲಾವಣೆ, ನಕಲಿ ದಾಖಲೆ ನೀಡಿ ಬ್ಯಾಂಕ್ ಅಕೌಂಟ್ ತೆರೆಯುವುದು ಮತ್ತು ಆ ಮೂಲಕ ಆರ್ಥಿಕ ಅವ್ಯವಹಾರ, ವಂಚನೆ ತಡೆಯಲು ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ಪ್ರಧಾನಮಂತ್ರಿ ಜನಧನ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯಲು ಈ ನಿಯಮ ಅನ್ವಯವಾಗುವುದಿಲ್ಲ.

ಎರಡು ಲಕ್ಷ ರೂ. ಗಿಂತ ಹೆಚ್ಚಿನ ಮೌಲ್ಯದ ವಹಿವಾಟಿಗೆ ಪ್ಯಾನ್ ಕಡ್ಡಾಯ. ಕ್ಯಾಷ್, ಚೆಕ್ ಅಥವಾ ಕಾರ್ಡ್ ಮೂಲಕ  ವಹಿವಾಟು ಆದರೂ ಪ್ಯಾನ್ ಕಡ್ಡಾಯ. 50 ಸಾವಿರಕ್ಕೂ ಹೆಚ್ಚಿನ ಮೊತ್ತದ ನಗದು ವ್ಯವಹಾರ ಮಾಡಿದರೆ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಬ್ಯಾಂಕ್ ಡ್ರಾಫ್ಟ್, ಬ್ಯಾಂಕರ್ಸ್ ಚೆಕ್, ಎಲ್‌ಐಸಿ ಪಾಲಿಸಿ ಮೊತ್ತ ಹೀಗೆ ಯಾವುದೇ ರೀತಿಯ ಹಣದ ವಹಿವಾಟು ನಡೆಸಿದರೂ ಪ್ಯಾನ್ ಕಡ್ಡಾಯ.