ವಾಣಿಜ್ಯ ಸುದ್ದಿ

ಅಪ್ಪಟ ಲೆದರ್ ಉತ್ಪನ್ನಗಳಿಗೊಂದು ಆನ್‍ಲೈನ್ ವೇದಿಕೆ

ಬೆಂಗಳೂರು: ದಿನಕಳೆದಂತೆ ಇ-ಕಾಮರ್ಸ್ ಉದ್ಯಮ, ಭಾರತದ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಅಲ್ಲದೆ, ಇ ಕಾಮರ್ಸ್ ವ್ಯವಹಾರ, ಉತ್ಪನ್ನ ಹಾಗೂ ಸೇವೆಗಳ ಆಧಾರದ ಮೇಲೆ ವಿಂಗಡಣೆಯಾಗುತ್ತಿದೆ. ಇದಕ್ಕೆ ಹೊಸ ಸೆರ್ಪಡೆ ಲೆದರ್ ಉತ್ಪನ್ನಗಳ ಎಕ್ಸ್‍ಕ್ಲೂಸಿವ್ ಆನ್‍ಲೈನ್ ಸ್ಟೋರ್ ಪಕ್ಕಾಲೆದರ್ ಡಾಟ್ ಕಾಮ್. ಹೆಸರೇ ಸೂಚಿಸುವಂತೆ ಪಕ್ಕಾಲೆದರ್ ಡಾಟ್ ಕಾಮ್ ಗುಣಮಟ್ಟದ ಗ್ಯಾರಂಟಿಯನ್ನು ನೀಡುತ್ತದೆ.
ಜನವರಿ 1, 2016ರಿಂದ ಆನ್‍ಲೈನ್‍ನಲ್ಲಿ ಪಕ್ಕಾಲೆದರ್ ಡಾಟ್ ಕಾಮ್ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಸಲು ಪ್ರಾರಂಭಿಸುತ್ತಿದೆ.
ಭಾರತದಲ್ಲಿ ಉತ್ಪಾದನೆಯಾಗುವ ಫುಟ್‍ವೇರ್‍ಗಳ ಪೈಕಿ ಶೇ.80ರಷ್ಟು ಸಿಂಥೆಟಿಕ್ ಲೆದರ್ ಉತ್ಪನ್ನಗಳಾಗಿವೆ. ಶೇಕಡಾ 20ರಷ್ಟು ಮಾತ್ರ ಅಪ್ಪಟ ಲೆದರ್ ಉತ್ಪನ್ನಗಳಾಗಿದ್ದು, ಸಿಂಥೆಟಿಕ್ ಲೆದರ್ ಭರಾಟೆಯಲ್ಲಿ ಅಪ್ಪಟ ಲೆದರ್ ಉತ್ಪನ್ನಗಳನ್ನು ಗುರ್ತಿಸುವುದು ಗ್ರಾಹಕರಿಗೆ ಕಠಿಣವಾಗಿದೆ. ಈ ನಿಟ್ಟಿನಲ್ಲಿ ಪಕ್ಕಾಲೆದರ್ ಡಾಟ್ ಕಾಮ್, ಅಂತರಾಷ್ಟ್ರೀಯ ವಿನ್ಯಾಸದ ಅಪ್ಪಟ ಲೆದರ್ ಉತ್ಪನ್ನಗಳನ್ನು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಭಾರತೀಯ ಲೆದರ್ ಉತ್ಪನ್ನಗಳ ಮಾರುಕಟ್ಟೆ ಅತ್ಯಂತ ದೊಡ್ಡ ಅಸಂಘಟಿತ ವಲಯವಾಗಿದು,್ದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೋತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗುವಂತೆ ಮಾಡಲು ಮೆಟಾಮಾರ್ಪೋಸಿಸ್ ವೆಂಚರ್ಸ್ ಸಂಸ್ಥೆ, ಪಕ್ಕಾಲೆದರ್ ಡಾಟ್ ಕಾಮ್ ಎಂಬ ಇ-ಕಾರ್ಟ್ ಅನ್ನು ಪರಿಚಯಿಸುತ್ತಿದೆ.