ದೊಡ್ಡ ಸುದ್ದಿ

ಮಗ ಕಂಡ ಕನಸ್ಸು ತಂದೆ ಮಾಡಿದ ನನಸು: ಅಂಡರ್‌ವಾಟರ್‌ನಲ್ಲಿ ಭರತ್ ಭಟ್ಟ ಕಟ್ಟಿದ ರೆಸ್ಟೋರೆಂಟ್ !

ಇದು ಭಾರತದಲ್ಲಂತೂ ಮೊದಲ ಪ್ರಯತ್ನ ಎಂದೇ ಪರಿಗಣಿಸಬಹುದು. ಎರಡು ದಿನಗಳ ಹಿಂದೆಯಷ್ಟೇ ರೆಸ್ಟೋರೆಂಟ್‌ವೊಂದು ಆರಂಭವಾಗಿದೆ. ಇದರಲ್ಲಿ ಬರೀ ಸಸ್ಯಹಾರವನ್ನು ಮಾತ್ರ ನೀಡಲಾಗುತ್ತಿದೆ ಎಂದರೆ ಅಲ್ಲಿ ಎಲ್ಲಿದೆ ಕುತೂಹಲ ಸ್ವಾಮಿ. ಇದು ಅಂತೀಥ ರೆಸ್ಟೋರೆಂಟ್ ಅಲ್ಲ. ೨೦ ಅಡಿ ಆಳದಲ್ಲಿ ಅಂಡರ್‌ವಾಟರ್ ರೆಸ್ಟೋರೆಂಟ್ ಎಂದರೆ ಕುತೂಹಲವಂತೂ ಬಂದೇ ಬಿಡುತ್ತದೆ.
ಅಹಮಾದಬಾದ್ ಮೂಲದ ಭರತ್ ಭಟ್ಟ ಎನ್ನುವ ಉದ್ಯಮಿ ಕನಸ್ಸಿನ ರೆಸ್ಟೋರೆಂಟ್ ‘ರಿಯಲ್ ಪೋಸಿಡೀನ್’ ಇರೋದು ಮಾತ್ರ ಅಂಡರ್‌ವಾಟರ್‌ನಲ್ಲಿಯಂತೆ. ಗ್ರೀಕ್ ಸಮುದ್ರ ದೇವತೆಯಾದ ಪೋಸಿಡೀನ್ ಅವರ ಹೆಸರನ್ನು ಈ ರೆಸ್ಟೋರೆಂಟ್‌ಗೆ ನೀಡಲಾಗಿದೆ. ೩೨ ಕುರ್ಚಿಗಳಿರುವ ರೆಸ್ಟೋರೆಂಟ್‌ನಲ್ಲಿ ೧,೬೦,೦೦೦ ಲೀಟರ್ ನೀರಿನ ಅಕ್ವೇರಿಯಂ ಕೂಡ ಇದೆ. ಇದರಲ್ಲಿ ೪೦೦೦ ಸಾವಿರದಷ್ಟು ನಾನಾ ಜಾತಿಗೆ ಸೇರಿದ ಮೀನುಗಳಿದೆ.
ಭರತ್ ಭಟ್ಟ ಹೇಳುವಂತೆ ‘ ಈ ಯೋಜನೆ ನನ್ನ ಪುತ್ರನ ಕನಸ್ಸು. ೩-೪ ವರ್ಷಗಳಿಂದ ಈ ಯೋಜನೆಯ ನೀಲಾನಕ್ಷೆ ತಯಾರು ಮಾಡಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಇದರ ಕಾಮಗಾರಿ ಆರಂಭವಾಯಿತು.ಫೆ.೧ರಂದು ಇದರ ಉದ್ಘಾಟನೆ ಕೂಡ ಆಯಿತು. ಇದರಲ್ಲಿ ಮುಂದೆ ಮ್ಯೂಸಿಕ್ ಬ್ಯಾಂಡ್ ಕೂಡ ಲೈವ್‌ನಲ್ಲಿ ಕೊಡಬೇಕು ಎಂದುಕೊಂಡಿದ್ದೇವೆ ಎಂದು ಮಾತು ಪೋಣಿಸುತ್ತಾರೆ. ಮೊದಲ ದಿನವೇ ಬರೋಬರಿ ೧೫೦೦ ಗ್ರಾಹಕರು ಬಂದು ಸಸ್ಯಹಾರ ಭೋಜನವನ್ನು ಮಾಡಿಕೊಂಡು ಹೋಗಿದ್ದಾರಂತೆ. ಈಗಾಗಲೇ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿ ಈ ನಗರಕ್ಕೂ ಮಾನ್ಯತೆ ನೀಡಲಾಗಿದೆ.