ದೊಡ್ಡ ಸುದ್ದಿ

ಸೆಕ್ಸ್‌ ಮಾಡಿದ ಬಳಿಕ ಈ ತಪ್ಪುಗಳನ್ನು ತಪ್ಪಿಯೂ ಮಾಡಬೇಡಿ

ನಾವಿಲ್ಲಿ ನಿಮಗೆ ಹೇಳ ಹೊರಟಿರುವ ಆ ಯಾವ ತಪ್ಪುಗಳನ್ನು ನೀವು ಮಿಲನಕ್ರಿಯೆಯ ಬಳಿಕ ಮಾಡಲೇಬಾರದು…

ಸೆಕ್ಸ್ ಮಾಡಿದ ಕೂಡಲೇ ಮಲಗೋದು :  ಸೆಕ್ಸ್‌ ಮಾಡಿದ ನಂತರ ಮಾಡುವ ಬಹುದೊಡ್ಡ ತಪ್ಪಾಗಿದೆ. ಮಿಲನ ಕ್ರಿಯೆ ನಡೆಸಿದ ಕೂಡಲೇ ಮಲಗೋದು ಸಂಬಂಧ ಉಳಿಸಿಕೊಳ್ಳುವಲ್ಲಿ ಆರೋಗ್ಯಕರ ವಿಷಯವಲ್ಲ. ಅದಕ್ಕೆ ಬದಲಾಗಿ ಮಲಗುವ ಮುನ್ನ ಒಬ್ಬರ ಜೊತೆ ಇನ್ನೊಬ್ಬರು ಮಾತುಕತೆ ನಡೆಸಿ. ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

ಕೂಡಲೇ ಸ್ನಾನ ಮಾಡುವುದು : ಮಿಲನಕ್ರಿಯೆ ಆದ ಕೂಡಲೇ ಅಥವಾ ನಡೆಸುವ ಸಂದರ್ಭದಲ್ಲಿ ಪದೇ ಪದೇ ವಾಶ್‌ ರೂಮ್‌ಗೆ ಹೋಗಿ ಕ್ಲೀನ್‌ ಮಾಡೋದು ಅಥವಾ ಸ್ನಾನ ಮಾಡೋದು ಮಾಡಲೇ ಬೇಡಿ. ನೀವು ಹೀಗೆ ಮಾಡಿದರೆ ಸಂಗಾತಿಗೆ ಒಬ್ಬಂಟಿ ಎಂಬ ಭಾವನೆ ಬರುತ್ತದೆ. ಇದರ ಬದಲು ನೀವು ಸಂಗಾತಿ ಜೊತೆಗೆ ಸ್ನಾನ ಮಾಡಲು ಹೋಗಿ.

ಫೋನ್‌ನಲ್ಲಿ ಮಾತನಾಡೋದು/ ಮೆಸೇಜ್‌ ಮಾಡೋಡು :
ನೀವು ಸೆಕ್ಸ್‌ ಮಾಡಿದ ಕೂಡಲೇ ಫೋನ್‌ನಲ್ಲಿ ಮಾತನಾಡಿದರೆ ಅಥವಾ ಮೆಸೇಜ್‌ ಮಾಡಲು ಕುಳಿತರೆ ಅದು ಸಹ ದೊಡ್ಡ ತಪ್ಪು. ಇದರಿಂದ ನಿಮ್ಮ ಸಂಗಾತಿಗೆ ನಿಮಗೆ ಅವರ ಮೇಲೆ ಪ್ರೀತಿಯೇ ಇಲ್ಲ ಎಂಬುದು ಅರ್ಥವಾಗುತ್ತದೆ.

ಕೆಲಸ ಅಥವಾ ಓದಲು ಹೋಗುವುದು : ಇಂಟಿಮೆಟ್‌ ಸೆಶನ್‌ ಆದ ಕೂಡಲೇ ನೀವು ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಇದರ ಅರ್ಥ ನಿಮ್ಮ ಮನಸ್ಸಿನಲ್ಲಿ ಸಂಗಾತಿ ಅಲ್ಲ ಕೇವಲ ಕೆಲಸ ಇದೆ ಎಂದು.

ಬೇರೆ ಬೇರೆಯಾಗಿ ಮಲಗೋದು :
ಇದು ಸಹ ಸರಿಯಲ್ಲ. ನೀವು ಯಾವಾಗಲೂ ಬೇರೆಯಾಗಿ ಮಲಗುವುದಿದ್ದರೂ ಸಹ ಸೆಕ್ಸ್‌ ಬಳಿಕವಾದರೂ ಜೊತೆಯಾಗಿ ಮಲಗಲೇಬೇಕು.ಯಾಕೆಂದರೆ ಉತ್ತಮ ಸಂಬಂಧಕ್ಕಾಗಿ ಕನೆಕ್ಟಿವಿಟಿ ಡೆವೆಲಪ್‌ಮೆಂಟ್‌ ಅಗತ್ಯವಾಗಿದೆ.

ಮಕ್ಕಳನ್ನು ಜೊತೆಯಾಗಿ ಮಲಗಿಸೋದು : ಹೆಚ್ಚಿನ ಎಲ್ಲಾ ಜನರಿಗೆ ಈ ಅಭ್ಯಾಸ ಇರುತ್ತದೆ. ಆದರೆ ಸೆಕ್ಸ್‌ ಬಳಿಕವೂ ಇದನ್ನು ಮಾಡುವುದು ಸರಿಯಲ್ಲ. ಆ ಸಮಯ ಪೂರ್ತಿಯಾಗಿ ನಿಮ್ಮ ಸಂಗಾತಿಗಾಗಿ ಮೀಸಲಿಡಿ. ಮಕ್ಕಳನ್ನು ನಿಮ್ಮ ಹತ್ತಿರದ ಕೋಣೆ ಅಥವಾ ತಂದೆ ತಾಯಿಯ ಬಳಿ ಬಿಡಿ.

ಕಿಚನ್‌ ಕಡೆ ಓಡೋದು : ಸೆಕ್ಸ್ ಮಾಡಿದ ಬಳಿಕ ಏನೋ ಕೆಲಸದ ನೆನಪಾಗಿ ಕಿಚನ್‌ ಕಡೆ ಓಡೋದನ್ನು ನಿಲ್ಲಿಸಿ. ಆ ಕೆಲಸ ನಾಳೆ ಮಾಡಿದರೂ ನಡೆಯುತ್ತದೆ. ಈ ಸಮಯ ನಿಮ್ಮ ಸಂಗಾತಿಗಾಗಿ ಮೀಸಲಿಟ್ಟ ಮೇಲೆ ಅವರಿಗೆ ಯಾವುದೇ ತೊಂದರೆ ಮುಜುಗರವಾಗದಂತೆ ನೋಡಿಕೊಳ್ಳಿ.