ಲೈಫ್ ಸ್ಟೈಲ್ ಹೆಲ್ತ್ ಪ್ಲಸ್ ಹೊಸ ಸುದ್ದಿ

ದಿನನೂ ಬೆಡ್ ಮೇಲೆ ಮಲಗಿ ಮಾಡಿದರೆ ಒಳ್ಳೆಯದು..

ಮದುವೆಯಾದ ನಂತರವಂತೂ ಅಗತ್ಯವಾಗಿ ಮಾಡಲೇಬೇಕು. ಇಂದು ನಾವು ನಿಮಗೆ ಪ್ರತಿ ದಿನ ಸೆಕ್ಸ್‌ ಮಾಡುವುರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಹೇಳುತ್ತೇವೆ…

1. ಎಕ್ಸ್‌ರ್‌ಸೈಸ್‌ ಮಾಡುವ ಉತ್ತಮ ವಿಧಾನ :
ಸೆಕ್ಸ್‌ ಎಂಬುದು ಒಂದು ಶಾರೀರಿಕ ಕ್ರಿಯೆಯಾಗಿದೆ. ಸೆಕ್ಸ್‌ ಮಾಡುವುದರಿಂದ ನಿಮ್ಮ ದೇಹದಲ್ಲಿ ಪರಿಣಾಮಕಾರಿ ಬದಲಾವಣೆ ಕಂಡುಬರುತ್ತದೆ. ಶಾರೀರಿಕ ವ್ಯಾಯಾಮ ಅಥವಾ ವರ್ಕ್‌ಔಟ್‌ ಮಾಡಿದ ನಂತರ ಯಾವರೀತಿ ಉತ್ತಮ ಬೆಳವಣಿಗೆ ಕಂಡು ಬರುತ್ತದೋ ಅದೇ ರೀತಿ ಸೆಕ್ಸ್‌ ಮಾಡುವುದರಿಂದ ದೇಹಕ್ಕೆ ಉತ್ತಮ ಆರೋಗ್ಯ ದೊರೆಯುತ್ತದೆ. ನೀವು ಒಂದು ವಾರದಲ್ಲಿ ಮೂರು ಸಲ ಸೆಕ್ಸ್ ಮಾಡಿದರೆ ವರ್ಷದಲ್ಲಿ ನೀವು 75 ಮೈಲು ಜಾಗಿಂಗ್ ಮಾಡಿದರೆ ಎಷ್ಟು ಕ್ಯಾಲರಿ ನಷ್ಟವಾಗುತ್ತದೋ ಅಷ್ಟೇ ಕ್ಯಾಲರಿ ನಷ್ಟವಾಗುತ್ತದೆ ಎಂಬುದು ರಿಸರ್ಚ್‌ ಮೂಲಕ ತಿಳಿದುಬಂದಿದೆ.

2. ನೋವಿನಿಂದ ಮುಕ್ತಿ..
‘ಇವತ್ತು ಬೇಡಾ…. ಇವತ್ತು ನನಗೆ ತುಂಬಾ ತಲೆನೋವು ಆಗುತ್ತಿದೆ…’ ಎಂದು ಸುಮ್ಮನೆ ಕಾರಣ ಹೇಳೋದು ಇನ್ನು ನಡೆಯೋದಿಲ್ಲ. ಯಾಕೆಂದರೆ ಸೆಕ್ಸ್‌ ಮಾಡುವುದರಿಂದ ಮಹಿಳೆ ಮತ್ತು ಪುರುಷ ಇಬ್ಬರ ಶರೀರದಲ್ಲಿ ಸಹ ಇಂಡಾರ್ಫಿನ್‌ ಎಂಬ ಹಾರ್ಮೋನ್‌ ಬಿಡುಗಡೆಯಾಗುತ್ತದೆ. ಇದು ಶರೀರದಲ್ಲಿ ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ಸೆಕ್ಸ್‌ ಮಾಡುವುದರಿಂದ  ಮಹಿಳೆಯರಲ್ಲಿ ಫರ್ಟಿಲಿಟಿ ಪವರ್‌ ಸಹ ಹೆಚ್ಚಾಗುತ್ತದೆ.

3. ಪ್ರೋಸ್ಟೇಟ್‌ ಗ್ರಂಥಿಯ ಸುರಕ್ಷೆ :
ಸೆಕ್ಸ್‌ ಮಾಡುವಾಗ ಯಾವ ದ್ರವ ನಮ್ಮ ದೇಹದಿಂದ ಹೊರ ಬರುತ್ತದೆ ಅದು ಹೆಚ್ಚಾಗಿ ಪ್ರೋಸ್ಟೇಟ್‌ ಗ್ರಂಥಿಯ ಮೂಲಕ ಹೊರ ಬರುತ್ತದೆ. ಈ ಸಂದರ್ಭದಲ್ಲಿ ಎಲ್ಲಿಯಾದರೂ ಎಜ್ಯಾಕ್ಯುಲೇಶನ್‌ ಪ್ರಕ್ರಿಯೆ ನಿಂತರೆ ಆ ದ್ರವ ಗ್ರಂಥಿಯಲ್ಲೇ ಉಳಿದುಕೊಳ್ಳುತ್ತದೆ. ಇದರಿಂದ ಸೆಪ್ಟಿಕ್‌ ಅಥವಾ ಹಲವಾರು ರೀತಿಯ ಸಮಸ್ಯೆಗಳು ಸಹ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಎಜ್ಯಾಕುಲೇಶನ್‌ ಪ್ರಕ್ರಿಯೆ ನಡೆದರೆ ಪ್ರೋಸ್ಟೇಟ್‌ ಗ್ರಂಥಿ ಸುರಕ್ಷಿತವಾಗಿರುತ್ತದೆ.

4. ಒತ್ತಡ ನಿವಾರಕ :
ಸೆಕ್ಸ್‌ ಮಾಡುವುದರಿಂದ ಒತ್ತಡ ಅಥವಾ ಸ್ಟ್ರೆಸ್‌ ನಿವಾರಣೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ. ಈ ಪ್ರಕ್ರಿಯೆ ನಡೆದಾಗ ಡೊಪಾಮಯಿನ್‌ ಹೆಸರಿನ ಒಂದು ಪದಾರ್ಥ ಉತ್ಪತ್ತಿಯಾಗುತ್ತದೆ. ಇದು ಒತ್ತಡ ಉಂಟುಮಾಡುವ ಹಾರ್ಮೋನ್‌ಗಳೊಂದಿಗೆ ಫೈಟ್ ಮಾಡುತ್ತದೆ. ಇದಲ್ಲದೆ ಇಂಡಾರ್ಫೀನ್‌ ಹಾರ್ಮೋನ್‌ ಮತ್ತು ಆಕ್ಸಿಟಾಕ್ಸಿನ್‌ ಸಹ ಶರೀರದಲ್ಲಿ ಇತ್ಪತ್ತಿಯಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಉಂಟಾಗುವ ಎಲ್ಲಾ ನೋವುಗಳಿಗೆ ನಿವಾರಣೆ ದೊರೆಯುತ್ತದೆ.