ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಹುಡುಗಿ ತೊಟ್ಟ ಚಿಕ್ಕ ಬಟ್ಟೆ ನೋಡಿದ ಕ್ರಿಕೆಟಿಗ ಹಸೀಮ್ ಆಮ್ಲಾ ಮಾಡಿದ್ದೇನು?

ಅವಳ ತುಂಡುಗೆ ನೋಡಿ ಆತ ನಿಜಕ್ಕೂ ದಂಗಾಗಿ ಹೋಗಿದ್ದ. ನೀನು ನನ್ನ ಹತ್ತಿರ ಬರಲೇಬೇಡ ಎಂದು ನೇರವಾಗಿ ಹೇಳುವ ಮೂಲಕ ಮೊಡರ್ನ್ ಮಹಿಳಾ ವರದಿಗಾರ್ತಿಗೆ ಮುಜುಗರ ಮಾಡಿದ. ಹೌದು ಇದು ಕ್ರಿಕೆಟಿಗ ಅದರಲ್ಲೂ ಸೌ ಆಫ್ರಿಕಾ ತಂಡ ಬ್ಯಾಟ್ಸ್‌ಮನ್ ಹಸೀಮ್ ಆಮ್ಲಾ ಅವರ ಮಾತು.

ನಾನು ನಿಮ್ಮ ಕುರಿತು ಒಂದು ಸಂದರ್ಶನ ಮಾಡಬೇಕು ಎಂದು ಭಾರತೀಯ ಮೂಲದ ಖಾಸಗಿ ಚಾನೆಲ್ ವರದಿಗಾರ್ತಿಯೊಬ್ಬಳು ಆಮ್ಲಾಳಿಗೆ ದುಂಬಾಳು ಬಿದ್ದಳು. ಹಸೀಮ್ ಕೂಡ ಓಕೆ ನೀವು ಇಷ್ಟು ಸಮಯಕ್ಕೆ ಬಂದು ಬಿಡಿ ಎಂದು ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟರು.

ಆದರೆ ವರದಿಗಾರ್ತಿ ಹಾಗೂ ಕ್ಯಾಮರಾಮನ್ ಜತೆಯಾಗಿ ಹೋದರು. ಆದರೆ ವರದಿಗಾರ್ತಿಯಂತೂ ತೀರಾ ಸಣ್ಣದಾದ ಬಟ್ಟೆ ಹಾಕಿಕೊಂಡಿದ್ದಳು. ತಕ್ಷಣ ಅಲರ್ಟ್ ಆದ ನೀವು ನನ್ನ ಜತೆಗೆ ಸಂದರ್ಶನ ಮಾಡಬೇಕು ಎಂದಾದರೆ ಪೂರ್ತಿ ಬಟ್ಟೆ ತೊಟ್ಟುಕೊಮಡು ಬನ್ನಿ. ಇಲ್ಲವಾದರೆ ನನ್ನ ಹತ್ತಿರ ಬರಲೇಬೇಡಿ ಎಂದು ಗದರಿಸಿ ಕಳುಹಿಸಿದ. ವರದಿಗಾರ್ತಿ ಗರಂ ಆಗಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಲಾಗಿದೆ ಎನ್ನುವ ಆರೋಪ ಹೊರಿಸಿ ಆಮ್ಲಾರಿಗೆ ಬಾಯಿಗೆ ಬಂದ ರೀತಿಯಲ್ಲಿ ಗದರಿಸಿದ್ದಾಳೆ.

ಆದರೆ ಆಮ್ಲಾರು ಮಾಡಿದ್ದು ಸರಿಯಾಗಿಯೇ ಇದೆ ಎಂದು ಮುಸ್ಲಿ ಪರವಾದ ಸಂಘಟನೆಗಳು ಹೇಳಿಕೊಳ್ಳುವ ಮೂಲಕ ಬಟ್ಟೆ ಶಾಸ್ತ್ರಕ್ಕೆ ಹೊಸ ತಿರುವುಗಳು ಕಾಣಿಸಿಕೊಂಡಿದೆ.