ದೊಡ್ಡ ಸುದ್ದಿ ಹೊಸ ಸುದ್ದಿ

ನೀಲಿ ಚಿತ್ರಗಳನ್ನು ನೀವು ನೋಡ್ತೀರಾ.. ಇದನ್ನು ಕಡ್ಡಾಯವಾಗಿ ಓದಿ

ನೀವು ಅಂದುಕೊಂಡಿರಬಹುದು ಹೆಚ್ಚು ಪಾರ್ನ್‌ ಚಿತ್ರಗಳನ್ನು ನೋಡುವುದರಿಂದ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ ಹಾಗೂ ಸುರಕ್ಷಿತವಾಗಿ ಮಾಡುವ ವಿಧಾನ ತಿಳಿಯುತ್ತದೆ ಎಂದು. ಆದರೆ ಹೆಚ್ಚೆಚ್ಚು ಪಾರ್ನ್‌  ಸಿನೆಮಾ ನೋಡುವುದು ನಿಮ್ಮನ್ನು ಲೈಂಗಿಕವಾಗಿ ಆಕ್ರಮಣಶೀಲರನ್ನಾಗಿಸಬಹುದು ಎನ್ನುತ್ತದೆ ನೂತನ ಅಧ್ಯಯನ.

ಒಟ್ಟು ಏಳು ದೇಶಗಳಲ್ಲಿ ನಡೆಸಲಾಗಿರುವ 22ಅಧ್ಯಯನಗಳ ಪ್ರಕಾರ, ಪಾರ್ನ್‌ ಸಿನೆಮಾಗಳನ್ನು ನೋಡುವುದು, ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಲೈಂಗಿಕ ಆಕ್ರಮಣಶೀಲತೆ ಬೆಳೆಯುವಂತೆ ಮಾಡುತ್ತದೆ ಎನ್ನುತ್ತದೆ. ದೈಹಿಕ ಲೈಂಗಿಕ ಆಕ್ರಮಣಶೀಲತೆಗಿಂತಲೂ, ಮಾತಿನ ಆಕ್ರಮಣಶೀಲತೆ ಹೆಚ್ಚಾಗುತ್ತದೆ ಎಂದು ಕೂಡ ಈ ಅಧ್ಯಯನ ತಿಳಿಸಿದೆ.

ಹೆಚ್ಚೆಚ್ಚು ಪಾರ್ನ್‌ ನೋಡಿದವರು ಅಲ್ಲಿರುವಂತೆ ನಿಜ ಜೀವನದಲ್ಲೂ ಆಗಬೇಕು ಎಂದು ಬಯಸುತ್ತಾರೆ. ಆದರೆ ಚಿತ್ರಗಳಲ್ಲಿ ತೋರಿಸಿದ್ದು ಇಲ್ಲಿ ನಡೆಯದೇ ಇರಬಹುದು. ಇದರಿಂದ ಲೈಂಗಿಕ ಆಕ್ರಮಣಶೀಲತೆ, ಲೈಂಗಿಕ ಕಿರುಕುಳ ಮತ್ತು ಸೆಕ್ಸ್‌ಗಾಗಿ ಮಾಡಿದ ಬೆದರಿಕೆ ಹೆಚ್ಚಾಗುತ್ತದೆ.

ಆದರೆ ಇನ್ನೊಂದು ವಿಷಯ ಎನೆಂದರೆ ಪಾರ್ನ್‌ ಸಿನೆಮಾಗಳನ್ನು ನೋಡುವವರಲ್ಲಿ ಕೆಲವರು ಲೈಂಗಿಕವಾಗಿ ಆಕ್ರಮಣಶೀಲರಾಗದೇ ಸಹ ಇರುತ್ತಾರೆ ಎಂದು ಕೂಡ ತಿಳಿಸಿದೆ. ಈ ಅಧ್ಯಯನ ಜರ್ನಲ್ ಆಫ್ ಕಮ್ಯುನಿಕೇಶನ್ ನಲ್ಲಿ ಪ್ರಕಟವಾಗಿದೆ.