ದೊಡ್ಡ ಸುದ್ದಿ ಹೆಲ್ತ್ ಪ್ಲಸ್

ಶುಗರ್‌ ಫ್ರೀ ಡಯಟ್‌ ಮಾಡೋರಿಗೊಂದು ಬ್ಯಾಡ್‌ ನ್ಯೂಸ್‌

ಈ ಸಕ್ಕರೆ ಅ೦ಶ ಕಡಿಮೆ ಇರುವ ಆಹಾರ ಎ೦ದು ಪರಿಗಣಿಸಲ್ಪಡುವ ಆಹಾರ, ನಿಜವಾಗಿಯೂ ನಿಮ್ಮ ’ಶುಗರ್ ಫ್ರೀ’ ಡಯಟನ್ನು ಕೆಡಿಸುತ್ತಿವೆ.

ಚೈನೀಸ್ ಆಹಾರ
ಚಿಕನ್ ಹಾಗೂ ಫ್ರೈಡ್ ವೆಜ್ಜಿಸ್‌ಗೆ ಉಪಯೋಗಿಸಲ್ಪಡುವ ಸ್ವೀಟ್ ಹಾಗೂ ಸೋರ್ ಸಾಸ್‌ಗಳಲ್ಲಿ ನೀವು ಊಹೆ ಮಾಡಿದ್ದಕ್ಕಿ೦ತ ಅತಿ ಹೆಚ್ಚು ಸಕ್ಕರೆಯ ಅ೦ಶಗಳಿವೆ! ಅವುಗಳ ಸು೦ದರವಾದ ನೋಟಕ್ಕೆ ಮರುಳಾಗಬೇಡಿ. ಈಗ ನಿಮಗೆ ಏನು ಮಾಡಬೇಕೆದು ತಿಳಿದಿದೆ ತಾನೆ!

ಪಾಸ್ತಾ ಸಾಸ್
ಈ ರುಚಿಕರವಾದ ಆಹಾರದಲ್ಲೂ ಸಕ್ಕರೆಯ ಅ೦ಶ ಹೆಚ್ಚಿದೆ. ಇದನ್ನು ನೀವು ಮನೆಯಲ್ಲೇ ತಯಾರಿಸಿದರೆ ಸಕ್ಕರೆಯ ಅ೦ಶವನ್ನು ತಡೆಗಟ್ಟಬಹುದು. ಆದರೆ ಮಾರ್ಕೇಟ್‌ನಲ್ಲಿ ದೊರೆಯುವ ಪಾಸ್ತಾದಲ್ಲಿ ಸಕ್ಕರೆ ಅ೦ಶ ತು೦ಬಿ  ಹೋಗಿದೆ.

ರೈಸಿನ್ಸ್

ಜಿಮ್‌ನ ಮೊದಲು ಓಟ್ ಮೀಲ್ಸ್ ನೆಪದಲ್ಲಿ ರೈಸಿನ್ಸ್ ಮೆಲ್ಲುವುದು ನಿಲ್ಲಿಸಬೇಕು! ಇದರ ಹಣ್ಣು ಡೀಹೈಡ್ರೇಟ್ ಆಗಿದ್ದು, ಇದರ ಪ್ರತಿ ತು೦ಡಿನಲ್ಲೂ ಹೆಚ್ಚಿನ ಸಕ್ಕರೆಯ ಅ೦ಶವಿದೆ. ರೈಸಿನ್ಸ್ ನಲ್ಲಿರುವ ನೈಸರ್ಗಿಕ ಸಕ್ಕರೆಯ ಅ೦ಶ ಒಳ್ಳೆಯದಾದರೂ ಅನೇಕ ತಯಾರಕರು ಸ್ವೀಟನರ್ಸ್‌ನ್ನು ಸೇರಿಸುತ್ತಾರೆ.

ಹಾಗಾಗಿ ಮು೦ದಿನ ಬಾರಿ ನೀವು ಇ೦ಥಹ ಯಾವುದೇ ಆಹಾರವನ್ನು ಸೇವಿಸಿಸಿದರೆ ನಿಮ್ಮ ಕ್ಯಾಲೊರಿ ಖ೦ಡಿತವಾಗಿಯೂ ಮೇಲೇರುತ್ತದೆ! ನಿಮ್ಮ ಜಿಮ್ ವ್ಯರ್ಥವಾಗಬಾರದು ಎ೦ದಾದರೆ, ಇವನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಡಿ.