ದೊಡ್ಡ ಸುದ್ದಿ ಹೆಲ್ತ್ ಪ್ಲಸ್ ಹೊಸ ಸುದ್ದಿ

ಇಯರ್‌ ಫೋನ್‌ ಬಳಕೆ ಜಾಸ್ತಿನೇ ಮಾಡ್ತೀರಿ ಅಲ್ವಾ…?

ಸ್ವಲ್ಪ ಹೊತ್ತು ಇಯರ್‌ಫೋನ್‌ ಬಳಸಿದರೆ ಪರವಾಗಿಲ್ಲ. ಆದರೆ ಇಯರ್‌ ಫೋನ್‌ ಬಳಸಿ ಅರ್ಧಗಂಟೆ ಮಾತನಾಡುವುದು, ಬಹಳ ಹೊತ್ತು ಸಾಂಗ್‌ ಕೇಳುವುದು ಮಾಡಿದರೆ ಕಿವಿಯ ಮೇಲೆ ಪರಿಣಾಮ ಬೀರೋದು ಖಂಡಿತಾ.

ನಮ್ಮ ಕಿವಿಯು ಸೂಕ್ಷ್ಮವಾದ ಭಾಗಗಳಿಂದ ಮಾಡಲ್ಪಟ್ಟಿದ್ದು, ಶಬ್ದ ತರಂಗಗಳು ಕಿವಿಯ ಪರದೆ ಅಥವಾ ಟೆಂಪ್ಯಾನಿಕ್ ಮೆಂಬ್ರೇನ್‌ನನ್ನು ಕಂಪಿಸಿ ಕಾಕ್ಲಿಯಾ (Cochlea) ತಲುಪಿ, ಕಾಕ್ಲಿಯಾದ ತಳಭಾಗದಲ್ಲಿರುವ ರೋಮಗಳು ಹಾಗೂ ನರಗಳ ಮುಖಾಂತರ ಮೆದುಳನ್ನು ತಲುಪುತ್ತವೆ. ಇದರಿಂದ ಕಿವಿಗೆ ಹಾನಿಯಾಗುತ್ತದೆ.

ಇಯರ್ ಫೋನಿನ ಮೂಲಕ ಧ್ವನಿ ತರಂಗಾಂತರಗಳು ಯಾವುದೇ ಅಡೆ ತಡೆ ಇಲ್ಲದೆ ನೇರವಾಗಿ ಕಿವಿಗೆ ಅಪ್ಪಳಿಸುತ್ತವೆ. ಇದರ ಧ್ವನಿ 90 ಡೆಸಿಬಲ್ಸ್‌ಗಳಿಗಿಂತ ಹೆಚ್ಚಿದ್ದರೆ ಕಿವಿಗೆ ತೊಂದರೆಯಾಗುತ್ತದೆ. ಅಲ್ಲದೇ ಸತತವಾಗಿ 15 ನಿಮಿಷಗಳಿಗಿಂತ ಹೆಚ್ಚು ಬಳಸಿದರೆ ಮುಂದೆ ಕಿವಿ ಮಂದವಾಗುವ ಸಾಧ್ಯತೆ ಹೆಚ್ಚು.

ಇದಿಷ್ಟೇ ಅಲ್ಲ. ಒಬ್ಬರು ಉಪಯೋಗಿಸಿದ ಇಯರ್ ಫೋನನ್ನು ಮತ್ತೊಬ್ಬರು ಬಳಸಿದರೂ ಸಹ ತೊಂದರೆಯಾಗುವುದು ಖಂಡಿತಾ. ಅದೇನೆಂದರೆ ಒಬ್ಬರು ಬಳಸಿದ ಇಯರ್‌ ಫೋನ್‌ ಮತ್ತೊಬ್ಬರು ಬಳಕೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ. ಇದರಿಂದ ಕಿವಿಗೆ ಸಂಬಂಧಿಸಿದ ರೋಗಗಳು ಸಹ ಬರಬಹುದು.

ಇಯರ್ ಫೋನ್ ಅಥವಾ ಹೆಡ್ ಫೋನುಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ತರಂಗಗಳನ್ನು ಸೂಸುವ ಕಾರಣ, ಮೆದುಳಿನ ಮೇಲೂ ಇದು ಪ್ರಭಾವ ಬೀರುತ್ತದೆ ಎನ್ನಲಾಗಿದೆ.

ಪ್ರತಿದಿನ ಮ್ಯೂಸಿಕ್ ಪ್ಲೇಯರ್‌ನ ವಾಲ್ಯೂಮ್‌ 90 dB ಕ್ಕಿಂತ ಹೆಚ್ಚಿಟ್ಟು, ಹಲವಾರು ಗಂಟೆಗಳ ಕಾಲ ಮ್ಯೂಸಿಕ್ ಕೇಳುವುದರಿಂದ, ಕಿವಿಯ ಪರದೆ ತನ್ನ ಕಂಪಿಸುವ ಸಾಮರ್ಥ್ಯವನ್ನು ಮತ್ತು ಶಬ್ದ ಗ್ರಹಿಸುವ ಶಕ್ತಿಯನ್ನು ಕ್ರಮೇಣ ಕಳೆದುಕೊಳ್ಳುತ್ತಾ ಹೋಗಿ, ನಮ್ಮ ಶ್ರವಣ ಶಕ್ತಿ ಕುಗ್ಗುತ್ತದೆ. ಆದುದರಿಂದ ಇನ್ನು ಮುಂದೆ ಇಯರ್‌ ಫೋನ್‌ ಉಪಯೋಗ ಮಾಡುವಾಗ ಎಚ್ಚರವಹಿಸಿ.