ದೊಡ್ಡ ಸುದ್ದಿ ಹೆಲ್ತ್ ಪ್ಲಸ್

ಪ್ರೀತಿ ಪಾತ್ರರಿಗೆ ಹಗ್‌ ಮಾಡಿ ವೈದ್ಯರಿಂದ ದೂರವಿರಿ

ಹಗ್ಗಿಂಗ್‌ ಥೆರಪಿ ನೋವನ್ನು ಮರೆಸಲು ಹಾಗೂ ರೋಗ ಬರದಂತೆ ತಡೆಯಲು ಒಂದು ಅತ್ಯುತ್ತಮ ವಿಧಾನವಾಗಿದೆ. ಇದರಿಂದ ಮತ್ತೆ ಏನೆಲ್ಲ ಆಗುತ್ತದೆ ನೋಡಿ…

  1. ಹಗ್‌ ಮಾಡುವುರಿಂದ ಇಬ್ಬರ ನಡುವೆ ನಂಬಿಕೆ ಬೆಳೆಯುತ್ತದೆ. ಸುರಕ್ಷಿತ ಭಾವನೆ ಉಂಟಾಗುತ್ತದೆ.
  2. ಹಗ್‌ ಮಾಡುವುದರಿಂದ ಸಿಕ್‌ನೆಸ್‌, ರೋಗಗಳು, ಏಕಾಂಗಿತನ, ಒತ್ತಡ, ಚಿಂತೆ, ಕೋಪ ಎಲ್ಲವೂ ನಿವಾರಣೆಯಾಗುತ್ತದೆ.
  3. ಒಬ್ಬ ವ್ಯಕ್ತಿಯನ್ನು ತುಂಬಾ ಹೊತ್ತು ಹಗ್‌ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಹಾಗೂ ಸಂತೋಷ ತನ್ನಿಂದ ತಾನೆ ಉಂಟಾಗುತ್ತದೆ.
  4. ಅಪ್ಪಿಕೊಂಡರೆ ಇಮ್ಯುನ್‌ ಸಿಸ್ಟಮ್‌ ಹೆಚ್ಚು ಶಕ್ತಿಯುತವಾಗುತ್ತದೆ. ಇದರಿಂದ ಬಿಳಿ ರಕ್ತಕಣಗಳ ಸಮತೋಲನ ಕಾಯ್ದುಕೊಂಡು ನಿಮ್ಮ ಆರೋಗ್ಯಯುತವಾಗಿರಿಸಲು ಸಹಾಯಕವಾಗಿದೆ.
  5. ಹಗ್‌ ಮಾಡುವುರಿಂದ ನಮ್ಮ ಮೇಲೆ ನಮಗೆ ಪ್ರೀತಿ ಹೆಚ್ಚಾಗುತ್ತದೆ. ನಾವು ಸ್ಪೆಷಲ್‌ ಎಂಬ ಭಾವನೆ ಮೂಡುತ್ತದೆ.
  6. ಅಪ್ಪಿಕೊಳ್ಳುವುದರಿಂದ ಸ್ನಾಯುಗಳು ರಿಲ್ಯಾಕ್ಸ್‌ ಆಗುತ್ತದೆ. ದೇಹದಲ್ಲಿರುವ ಎಲ್ಲಾ ಟೆನ್ಶನ್ ನಿವಾರಣೆಯಾಗುತ್ತದೆ.
  7. ನರವ್ಯೂಹ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಹಗ್‌ ಸಹಾಯಕವಾಗಿದೆ.
  8. ಅಪ್ಪಿಕೊಳ್ಳುವುದು ಎಂದರೆ ಮೆಡಿಟೇಶನ್‌ ಅಥವಾ ನಗುವಿನಷ್ಟೆ ಅತ್ಯುತ್ತಮವಾದ ವಿಧಾನವಾಗಿದೆ. ಹಗ್‌ ಮಾಡುವುದರಿಂದ ಎಲ್ಲಾ ಟೆನ್ಶನ್‌ ಮರೆಯಾಗಿ ಖುಶಿಯಾಗಿ ಇರುವಂತೆ ಮಾಡುತ್ತದೆ.
  9. ಅಪ್ಪಿಕೊಳ್ಳುವಾಗ ಇಬ್ಬರು ವ್ಯಕ್ತಿಗಳ ನಡುವೆ ಎನರ್ಜಿ ಬದಲಾಗುತ್ತದೆ. ಇದರಿಂದ ಇಬ್ಬರ ಬಡುವಿನ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ.

ಇನ್ನೇಕೆ ತಡ ಹಗ್‌ ಡೇ ಗೆ ಮಾತ್ರ ಅಪ್ಪಿಕೊಳ್ಳುವುದನ್ನು ಸ್ಟಾಪ್‌ ಮಾಡಬೇಡಿ. ಬದಲಾಗಿ ಪ್ರತಿ ದಿನ ನಿಮ್ಮ ಸಂಗಾತಿಯನ್ನು ಹಗ್‌ ಮಾಡಿ ನೀವು ಆರೋಗ್ಯಯುತವಾಗಿರಿ.