ಜಾಬ್ ಜಂಕ್ಷನ್

ಸಿಎಸ್‌ಐಆರ್-ಯುಜಿಸಿ ನೆಟ್ ಎಕ್ಸಾಮ್

ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಮತ್ತು ವಿಶ್ವವಿದ್ಯಾಲಯದ ಧನಸಹಾಯ ಆಯೋಗ (ಯುಜಿಸಿ) ಜಂಟಿಯಾಗಿ ಜೂನಿಯರ್ ರೀಸರ್ಚ್ ಫೆಲೋಷಿಪ್ ಮತ್ತು ಲೆಕ್ಚರ್‌ಷಿಪ್‌ಗಾಗಿ ನಡೆಸುವ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.  ಪರೀಕ್ಷೆ ಬಹುತೇಕವಾಗಿ ಜೂನ್ 19 ರಂದು ನಡೆಯಲಿದೆ. ಇದರ ಮೂಲಕ ಜೂನಿಯರ್ ರೀಸರ್ಚ್ ಫೆಲೋಷಿಪ್ (ಜೆಆರ್‌ಎಫ್)ನೀಡಿಕೆಗೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿಸಿದ ವಿಷಯಗಳ ಉಪನ್ಯಾಸಕರ ನೇಮಕಕ್ಕೆ ಅರ್ಹತೆಯನ್ನು ನಿಗದಿಪಡಿಸಲಾಗುತ್ತದೆ.
ಜೆಆರ್‌ಎಫ್ ಅರ್ಹತೆ ಪಡೆದವರು ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಾಗಿ ದೇಶದ ವಿವಿಧ ವಿಶ್ವ ವಿದ್ಯಾಲಯ, ಸಂಶೋಧನಾ ಸಂಸ್ಥೆ ಅಥವಾ ರಾಷ್ಟ್ರೀಯ ಸಂಶೋಧನಾಲಯ ಸೇರಿಕೊಳ್ಳಬಹುದು. ಅಭ್ಯರ್ಥಿಗಳು ಜೆಆರ್‌ಎಫ್ ಅಥವಾ ಲೆಕ್ಚರ್‌ಷಿಪ್ ಗಾಗಿ ಅರ್ಜಿ ಸಲ್ಲಿಸಬಹುದು. ಫೆಲೋಷಿಪ್‌ಗೆ ಇರುವ ಅವಕಾಶ, ಅಭ್ಯರ್ಥಿಯ ಸಾಧನೆ ಎಲ್ಲವನ್ನೂ ಪರಿಗಣಿಸಿ ಸಿಎಸ್‌ಐಆರ್ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಫಲಿತಾಂಶ ಪ್ರಕಟಿಸುವಾಗ ಫೆಲೋಶಿಪ್ ಮತ್ತು ಲೆಕ್ಚರ್‌ಷಿಪ್‌ಗೆ ಎರಡು ಪ್ರತ್ಯೇಕ ಮೆರಿಟ್ ಲೀಸ್ಟ್ ಪ್ರಕಟಿಸಲಾಗುತ್ತದೆ. ಸೆಪ್ಟೆಂಬರ್/ಅಕ್ಟೋಬರ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಫೆಲೋಷಿಪ್‌ಗೆ ಸೇರಲು ಜನವರಿ 1, 2016ರಿಂದ ಎರಡು ವರ್ಷ ಕಾಲಾವಕಾಶವಿರುತ್ತದೆ.
ಅರ್ಹತೆಯೇನು?
ಎಂ.ಎಸ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು (ಬಿಎಸ್-ಎಂಎಸ್/ಬಿಎಸ್-೪
ವರ್ಷ/ಬಿಇ/ಬಿಟೆಕ್/ಬಿಪಾರ್ಮ್/ಎಂಬಿಬಿಎಸ್ ಪದವಿ ಸಂಯೋಜಿತ) ಅರ್ಜಿ ಸಲ್ಲಿಸಬಹುದು. ಆದರೆ ಕನಿಷ್ಠ ಶೇ. 55 ಅಂಕ ಪಡೆದು ತೇರ್ಗಡೆಯಾಗಿರಬೇಕಾದದು ಕಡ್ಡಾಯ (ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ಶೇ.೫೦ಅಂಕ). ಎಂ.ಎಸ್‌ಸಿಗೆ ಸೇರ್ಪಡೆಗೊಂಡವರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು. 28 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷಗಳ
ಸಡಿಲಿಕೆ ಇರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 1೦೦೦ ರೂಪಾಯಿ
ಹಾಗೂ ಒಬಿಸಿ ಅಭ್ಯರ್ಥಿಗಳು 5೦೦ ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 25೦ ರೂಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.
ಪರೀಕ್ಷೆ ಹೇಗೆ?
ಕೆಮಿಕಲ್ ಸೈನ್ಸ್, ಅರ್ಥ್, ಅಟ್ಮಾಸ್ಪೆರಿಕ್, ಒಷಿನ್ ಮತ್ತು
ಪ್ಲಾನೆಟರಿ ಸೈನ್ಸ್, ಲೈಫ್ ಸೈನ್ಸ್, ಮ್ಯಾಥ್‌ಮೆಟಿಕಲ್
ಸೈನ್ಸಸ್, ಫಿಜಿಕಲ್ ಸೈನ್ಸಸ್‌ವಿಷಯಗಳಿಗೆ ಸಂಬಂಧಿ ಸಿದಂತೆ ನೆಟ್‌ಪರೀಕ್ಷೆ ನಡೆಯಲಿದೆ. ಆಯ್ಕೆ ಮಾದರಿಯಲ್ಲಿ (ಎಮ್‌ಕ್ಯು) ಪರೀಕ್ಷೆ ನಡೆಯಲಿದ್ದು 2೦೦ ಅಂಕ ನಿಗದಿಪಡಿಸಲಾಗಿರುತ್ತದೆ. ಪರೀಕ್ಷಾವಧಿ೩ ಗಂಟೆಗಳಾಗಿರುತ್ತದೆ. ಜೂನ್9 ರಂದು ಬೆಳಗ್ಗೆ 9 ಗಂಟೆಯಿಂದ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯನ್ನು ಎ,ಬಿ,ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಮೊದಲ ಪತ್ರಿಕೆಯು ಎಲ್ಲ ವಿಷಯಗಳಿಗೂ ಅನ್ವಯಿಸುವ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಎರಡನೇಯ ಪತ್ರಿಕೆಯು ವಿಷಯಕ್ಕೆ ಸಂಬಂಧಿ ಸಿದ್ದಾಗಿದ್ದರೆ, ಮೂರನೇ ಪತ್ರಿಕೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆಗಳನ್ನು ಒಳಗೊಂಡ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆ-ಸೆಟ್‌ಮಾದರಿಯಲ್ಲಿಯೇ ಈ ಪರೀಕ್ಷೆಯೂ ನಡೆಯಲಿದೆ.
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಆನ್ನ್ಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಅದರ ಪ್ರಿಂಟ್‌ಔಟ್‌ತೆಗೆದುಕೊಂಡು,
ಫೋಟೋ ಅರ್ಜಿ ಶುಲ್ಕ ಪಾವತಿಸಿದ ಚಲನ್‌ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಪೋಸ್ ಕೂಡ ಮಾಡಬೇಕು. ದಿನಾಂಕ  07-03-2016 ರ ಒಳಗೆ ಅರ್ಜಿ ಕಳುಹಿಸಬೇಕಾದ ವಿಳಾಸ
The Deputy
Secretary (Exam), Human Resource
Development Group, Examination
Unit, CSIR Complex, Library Avenue,
Pusa, New Delhi-110012. ಒಬ್ಬರು ಒಂದು ವಿಷಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಸರಿಯಾದ ಮಾಹಿತಿ ಇಲ್ಲದ ಮತ್ತು ಅಗತ್ಯ ದಾಖಲೆಗಳನ್ನು
ಒದಗಿಸದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ವೆಬ್‌ನಲ್ಲಿ ನೀಡಿರುವ ವಿವರವಾದ ಮಾಹಿತಿಯನ್ನು ಗಮನಿಸುವಂತೆ ಕೋರಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1-೦3-2016
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29-2-2016
ದಾಖಲೆಗಳನ್ನು ಒದಗಿಸಲು ಕೊನೆಯ ದಿನ : 7-3-2016
ಪರೀಕ್ಷೆಯ ದಿನಾಂಕ : 19-6-2016
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ : ಬೆಂಗಳೂರು
ಅರ್ಜಿ ಸಲ್ಲಿಸಲು ವೆಬ್ ವಿಳಾಸ:
www.csirhrdg.res.in