ಎಜುಪ್ಲಸ್ ಜಾಬ್ ಜಂಕ್ಷನ್

ಕೇಂದ್ರ ಮೀಸಲು ಪೊಲೀಸ್ ಪಡೆ 3137 ಕಾನ್ಸ್‌ಟೇಬಲ್ ಹುದ್ದೆ

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಿವಿಧ ರಾಜ್ಯಗಳಲ್ಲಿ  ಖಾಲಿ ಇರುವ 3137 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆಗಳು
ಕಾನ್ಸ್‌ಟೇಬಲ್ (ಟೆಕ್ನಿಕಲ್ ಆಂಡ್ ಟ್ರೇಡ್ಸ್‌ಮನ್): 3137 ಹುದ್ದೆಗಳು ಖಾಲಿ ಇವೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ. ಕರ್ನಾಟಕದಲ್ಲಿ 122 ಹುದ್ದೆಗಳಿಗೆ ನೇಮಕ ನಡೆಯಲಿದೆ.
ತಾಂತ್ರಿಕ ಅನುಭವ: ಡ್ರೈವರ್ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕಾದರೆ ‘ಟ್ರಾನ್ಸ್‌ಪೋರ್ಟ್ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್’ ಹೊಂದಿರುವುದು ಕಡ್ಡಾಯ. ಫಿಟ್ಟರ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು 2 ವರ್ಷದ ಐಟಿಐ ಕೋರ್ಸ್ ಪೂರ್ಣಗೊಳಿಸಿರಬೇಕು.
ದೈಹಿಕ ಅರ್ಹತೆ: ಪುರುಷ ಅಭ್ಯರ್ಥಿಗಳಾದರೆ ಎತ್ತರ: 170 ಸೆಂ.ಮೀ, ಎದೆಯಳತೆ: ೮೦ ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳಾದರೆ ಎತ್ತರ: 157 ಸೆಂ.ಮೀ. ಇರಬೇಕು ಮತ್ತು ಎತ್ತರಕ್ಕೆ ತಕ್ಕ ತೂಕ ಹೊಂದಿರಬೇಕು.
ಅರ್ಜಿ ಶುಲ್ಕ 50 ರೂ. ಎಸ್‌ಐ ಬ್ಯಾಂಕ್‌ಅಥವಾ ನೆಟ್ ಬ್ಯಾಂಕಿಂಗ್‌ಕ್ರೆಡಿಟ್‌ಡೆಬಿಟ್‌ಕಾಡ್ ಮೂಲಕವೂ ಪಾವತಿಸಬದು. ಮಹಿಳೆಯರು/ಎಸ್/ಎಸ್/ಮಾಜಿ ಸೈನಿಕರಿಗೆ ಶುಲ್ಕ ವಿನಾಯ್ತಿ ಇದೆ.
ವಯೋಮಿತಿ: ಕಾನ್‌ಟೇಬ(ಡೈವರ್ ಹುದ್ದೆಗಳಿಗೆ 21ರಿಂದ 37 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಕನಿಷ್ಠ 18 ಮತ್ತು ಗರಿಷ್ಠ 23 ವರ್ಷದವರು  ಅರ್ಜಿ ಸಲ್ಲಿಸಲು ಅವಕಾಶ. ಒಬಿಸಿ ವರ್ಗದವರಿಗೆ 05 ವರ್ಷ, ಎಸ್/ಎಸ್ ಅಭ್ಯರ್ಥಿಗಳಿಗೆ 05 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ ಹೇಗೆ?
ಪಿಎಸ್‌ಟಿ ಮತ್ತು ಪಿಇಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಅಬ್ಜೆಕ್ಟಿವ್ ಟೈಪ್ ಮಲ್ಟಿಪಲ್ ಚಾಯ್ಸ್ ಮಾದರಿಯ ಪ್ರಶ್ನೆಪತ್ರಿಕೆಯಲ್ಲಿ 100 ಅಂಕಗಳಿಗೆ 2 ಗಂಟೆಯಲ್ಲಿ ಉತ್ತರಿಸಬೇಕು. ಅದರಲ್ಲಿ ಭಾಗ-೧ರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ, ಭಾಗ-2ರ ಪತ್ರಿಕೆಯು ಆಯಾ ಟ್ರೇಡ್‌ಗೆ ಅನ್ವಯಿಸಿದ
ಪ್ರಶ್ನೆಗಳನ್ನು ಹೊಂದಿರುತ್ತದೆ. ಇದರಲ್ಲಿ ಸಾಮಾನ್ಯ ಮತ್ತು ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳು ಶೇ.35 ಮತ್ತು ಎಸ್‌ಸಿ/ ಎಸ್‌ಟಿ/ಒಬಿಸಿ ಅಭ್ಯರ್ಥಿಗಳು ಶೇ.33 ಅಂಕ ಪಡೆಯುವುದು ಕಡ್ಡಾಯ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಟ್ರೇಡ್
ಟೆಸ್ಟ್ ಜೊತೆಗೆ ಮೆಡಿಕಲ್ ಟೆಸ್ಟ್ ಕೂಡ ನಡೆಸಲಾಗುತ್ತದೆ.
ಒಟ್ಟು ಹುದ್ದೆಗಳು:
3137
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
2016ರ ಮಾರ್ಚ್ 10
ಸಹಾಯವಾಣಿ: 04426840025.
ಅರ್ಜಿ ಸಲ್ಲಿಸಲು ಮತ್ತು ವಿವರಗಳನ್ನು ಪಡೆಯಲು:
http://crpf.nic.in