ಲೈಫ್ ಸ್ಟೈಲ್

ಪಿರಿಯಡ್ಸ್‌ ಸಮಯದಲ್ಲಿ ಸೆಕ್ಸ್‌ ಮಾಡೋದ್ರಿಂದ ಆಗೋ ಲಾಭ

ಹೌದು ಇದು ವೈಜ್ಞಾನಿಕವಾಗಿ ತಿಳಿದು ಬಂದ ಅಂಶ. ಈ ಸಮಯದಲ್ಲಿ ಸೆಕ್ಸ್‌ ಮಾಡುವಾಗ ಯಾವುದೇ ರೀತಿಯ ಇನ್‌ಫೆಕ್ಷನ್‌ ಆಗದಂತೆ ಪ್ರೊಟೆಕ್ಷನ್‌ ತೆಗೆದುಕೊಳ್ಳಲು ಮಹಿಳೆಯರು ತಮ್ಮ ಪಾರ್ಟ್‌ನರ್‌ಗೆ ಹೇಳಿಯೇ ಹೇಳುತ್ತಾರೆ. ಆದರೆ ಇದರಿಂದಾಗುವ ಲಾಭಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಕೇಳಿ…ದೇಹದ ನಾಜೂಕಾದ ಭಾಗ ತುಂಬಾ ಸಂವೇದನಶೀಲವಾಗಿರುತ್ತದೆ : ಪಿರಿಯಡ್ಸ್‌ ಸಮಯದಲ್ಲಿ ಸ್ತನ, ಯೋನಿಲಿಂಗ ಮತ್ತು ಹೊಟ್ಟೆಯ ಕೆಳಗಿನ ಭಾಗ ಅಧಿಕ ಸಂವೇದನಶೀಲವಾಗುತ್ತದೆ. ಈ ಸಮಯದಲ್ಲಿ ಸೆಕ್ಸ್‌ ಮಾಡುವುದರಿಂದ ಹೆಚ್ಚಿನ ಆನಂದ ಸಿಗುತ್ತದೆ.

ಪಿರಿಯಡ್ಸ್‌ ನೋವು ಕಡಿಮೆಯಾಗುತ್ತದೆ : ಪಿರಿಯಡ್ಸ್‌ ಸಮಯದಲ್ಲಿ ಮಹಿಳೆಯರು ಹೆಚ್ಚು ನೋವಿನಿಂದ ನರಳುತ್ತಾರೆ. ಮಹಿಳೆಯರು ಈ ದಿನಗಳಲ್ಲಿ ಸೆಕ್ಸ್‌ ಮಾಡುವಾಗ ಅವರಿಗೆ ಪಿರಿಯಡ್ಸ್‌ ಹೊಟ್ಟೆನೋವಿನಿಂದ ಮುಕ್ತಿಸಿಗುತ್ತದೆ.

ಅನ್ಯೋನ್ಯತೆಯಿಂದಿರಬಹುದು : ಪಿರಿಯಡ್ಸ್‌ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸೆಕ್ಸ್‌ ಮಾಡಲು ಹೆದರುತ್ತಾರೆ. ಆದರೆ ಈ ಸಮಯದಲ್ಲಿ ಸೆಕ್ಸ್‌ ಮಾಡುವುದರಿಂದ ಇಬ್ಬರ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ಒಬ್ಬರಿಗೊಬ್ಬರ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ.

ಮಹಿಳೆಯರು ಹೆಚ್ಚು ಉತ್ತೇಜಿತರಾಗುತ್ತಾರೆ : ಪಿರಿಯಡ್ಸ್ ಇರುವ ಸಮಯದಲ್ಲಿ ಮಹಿಳೆಯರು ಹೆಚ್ಚು ಉತ್ತೇಜಿತರಾಗಿರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಅವರಿಗೆ ಹೆಚ್ಚು ಉತ್ತೇಜನ ಮಾಡುವ ಅಗತ್ಯ ಇರುವುದಿಲ್ಲ. ಈ ಸಮಯದಲ್ಲಿ ಸಂಬಂಧ ಬೆಸೆಯಲು ಮಹಿಳೆಯರು ಹೆಚ್ಚು ಉತ್ಸುಕರಾಗಿರುತ್ತಾರೆ. ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ.

ಲ್ಯುಂಬ್ರಿಕೇಟ್‌ ಅಗತ್ಯ ಇಲ್ಲ : ಪಿರಿಯಡ್ಸ್‌ ಸಮಯದಲ್ಲಿ ಸೆಕ್ಸ್‌ ಮಾಡೋದಾದರೆ ನಿಮಗೆ ಯಾವುದೇ ಪ್ರಕಾರದ ಲ್ಯುಂಬ್ರಿಕೇಟ್‌ ಬಳಕೆ ಮಾಡುವ ಅವಶ್ಯಕತೆ ಇಲ್ಲ. ಆದರೆ ಪೀರಿಯಡ್ಸ್‌ನ ಕೊನೆ ದಿನಗಳಲ್ಲಿ ಸೆಕ್ಸ್‌ ಮಾಡುವುದಾದರೆ ಅದರ ಅಗತ್ಯ ಇದೆ.