ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಆಡೋಕೆ ಹೋಗಿ…ಅನಕೊಂಡದಿಂದ ಕಚ್ಚಿಸಿಕೊಂಡ ಕ್ರಿಕೆಟಿಗ ಶೇನ್ ವಾರ್ನ್‌‌

ನೆಟವರ್ಕ್‌ ಟೆನ್‌ ಟಿವಿ ರಿಯಾಲಿಟಿ ಶೋ ಆಗಿರುವ “I’m A Celebrity… Get Me Out Of Here!” ಎಂಬ ರಿಯಾಲಿಟಿ ಶೋನಲ್ಲಿ ವಾರ್ನ್‌ ತಮ್ಮ ತಲೆಯನ್ನು ಹಾವುಗಳನ್ನು ಹಾಕಲಾಗಿದ್ದ ಡಬ್ಬದೊಳಗೆ ಇರಿಸಿದ್ದಾರೆ. ಬಳಿಕ ಡಬ್ಬದಲ್ಲಿದ್ದ ಹಾವೊಂದು ವಾರ್ನ್‌ಗೆ ಕಚ್ಚಿರುವುದು ಟಿವಿ ಬಿಡುಗಡೆ ಮಾಡಿರುವ ಕಾರ್ಯಕ್ರಮದ ಪ್ರೋಮೊದಲ್ಲಿದೆ.

ಇನ್ನು ಹಾವಿನಿಂದ ಕಚ್ಚಿಸಿಕೊಂಡ ವಾರ್ನ್‌ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹಾವು ಕಚ್ಚಿದ ಜಾಗದಲ್ಲಿ ಸಣ್ಣದಾದ ಗುರುತಾಗಿದೆ. ಅಲ್ಲದೆ ಅದು ಶಾಶ್ವತ ಅಲ್ಲ ಎಂದು ದಿನಪತ್ರಿಕೆಯೊಂದು ತಿಳಿಸಿದೆ.