ಜಾಬ್ ಜಂಕ್ಷನ್ ದೊಡ್ಡ ಸುದ್ದಿ

ಭಾರತೀಯ ಉದ್ಯೋಗಿಗಳಿಗೆ ನಿವೃತ್ತಿಯೇ ಬೇಡವಂತೆ

ಉದ್ಯೋಗಿಗಳು ಎಂದ ಮೇಲೆ ನಿವೃತ್ತಿ ಸಹಜ. ಆದರೆ, ನಿವೃತ್ತಿ ನಂತರದ ಬದುಕಿಗೆ ಭಾರತೀಯ ಉದ್ಯೋಗಿಗಳು
ಸಿದ್ಧಗೊಂಡಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.  ವಿಲ್ಲಿಸ್ ಟವರ್ಸ್ ವ್ಯಾಟ್ಸನ್ ಗ್ಲೋಬಲ್ ಬೆನಿಟ್ಸ್ ಆಟಿಟ್ಯೂ ಸಮಿಕ್ಷೆಯಲ್ಲಿ ನಿವೃತ್ತಿ ನಂತರದ ಭಾರತೀಯ ಉದ್ಯೋಗಿಗಳ ಪರಿಸ್ಥಿತಿ ವ್ಯಕ್ತವಾಗಿದೆ.

“ವಯಸ್ಸು ಸವೆದಾಗ ಎದುರಾಗುವ ಅನಾರೋಗ್ಯ, ವೈದ್ಯಕೀಯ ವೆಚ್ಚಗಳು, ಮಕ್ಕಳ ಶಿಕ್ಷಣ ವೆಚ್ಚಗಳು ನಿವೃತ್ತ ಉದ್ಯೋಗಿಗಳಿಗೆ ಸವಾಲುಗಳಾಗಿ ನಿಂತಿವೆ. ಅಲ್ಲದೇ ಅವಿಭಕ್ತ ಕುಟುಂಬ ವ್ಯವಸ್ಥೆಯೂ ನಿವೃತ್ತರನ್ನು ದುರ್ಬಲರನ್ನಾಗಿಸುತ್ತಿದೆ,” ಎಂದು ಸಮೀಕ್ಷೆ ಹೇಳಿದೆ.  “ಹಣದುಬ್ಬರದ ಒತ್ತಡ, ಹೆಚ್ಚುವ ಖರ್ಚುಗಳು ನಿವೃತ್ತರನ್ನು ಮೆತ್ತಗಾಗಿಸುತ್ತಿವೆ. ಇದಕ್ಕೆಲ್ಲ ಮಾನಸಿಕವಾಗಿ ಉದ್ಯೋಗಿಗಳು ಸಿದ್ಧತೆ ನಡೆಸದಿರುವುದೇ ಸಮಸ್ಯೆಗೆ ಕಾರಣ,” ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

“ಉದ್ಯೋಗಿಗಳನ್ನು ನಿವೃತ್ತ ಜೀವನಕ್ಕೆ ಸಜ್ಜುಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಬಗ್ಗೆ ಚಿಂತನೆ ನಡೆಸದೇ ಹೋದರೆ ಎರಡು ಮೂರು ದಶಕಗಳಲ್ಲಿ ನಿವೃತ್ತರ ಸ್ಥಿತಿ ಬಿಗಡಾಯಿಸಲಿದೆ. ಸೂಕ್ತ ಆದಾಯವಿಲ್ಲದೆ ನಿವೃತ್ತ ಉದ್ಯೋಗಿಗಳು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು,” ಎಂದು ವಿಲ್ಲಿಸ್ ಟವರ್‍ಸ್‌ನ ವ್ಯಾಟ್ಸನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ನಾಥ್ ಅಭಿಪ್ರಾಯಪಟ್ಟಿದ್ದಾರೆ.