ಸಂಪಾದಕೀಯ

ಮೋದಿ ಹುಟ್ಟೂರಲ್ಲಿ ಅವಿವಾಹಿತೆಯರಿಗೆ ಮೊಬೈಲ್‌ ಬಳಕೆ ನಿಷಿದ್ಧ !

ಹೌದು.., ಸೂರಜ್ ಗ್ರಾಮದಲ್ಲಿ ಅವಿವಾಹಿತ ಮಹಿಳೆಯರಿಗೆ ಮೊಬೈಲ್ ಬಳಕೆಗೆ ನಿಷೇಧವಿದೆ. ಅಪ್ಪಿತಪ್ಪಿ ಅವರು ಮೊಬೈಲ್‌ ಬಳಸಿದ್ರೆ, ಅವರಿಗೆ ಗ್ರಾಮ ಪಂಚಾಯ್ತಿಯಿಂದ 2100 ರೂಪಾಯಿ ದಂಡ ವಿಧಿಸಲಾಗುತ್ತದೆಯಂತೆ. ಜತೆಗೆ ಕದ್ದುಮುಚ್ಚಿ ಮೊಬೈಲ್‌ ಬಳಸುವ ಅವಿವಾಹಿತ ಮಹಿಳೆಯರ ಬಗ್ಗೆ ಮಾಹಿತಿ ನೀಡುವವರಿಗೆ ಗ್ರಾಮ ಪಂಚಾಯ್ತಿ 200 ರೂಪಾಯಿ ಬಹುಮಾನ ನೀಡಲಾಗುತ್ತದೆ.

ಇಲ್ಲಿನ ಗ್ರಾಮಪಂಚಾಯ್ತಿ ಸದಸ್ಯರು ಹೇಳುವ ಪ್ರಕಾರ, ಹುಡುಗಿಯರು ಮೊಬೈಲ್, ಇಂಟರ್‌ನೆಟ್ ಬಳಸುವ ಅವಶ್ಯಕತೆ ಏನಿದೆ. ಇದರಿಂದ ಅವರ ಹಣ, ಟೈಮ್‌ ಎಲ್ಲವೂ ಹಾಳಾಗುತ್ತದೆ. ಇದರ ಬದಲಾಗಿ ಅವರು ಓದು ಹಾಗೂ ಇತರ ಕೆಲಸದಲ್ಲಿ ಮಗ್ನರಾಗಬೇಕೆಂಬ ಆದೇಶ ಇದೆಯಂತೆ.

ಅವರು ತಮ್ಮ ಸಂಬಂಧಿಗಳ ಜತೆ ಮಾತನಾಡಲು ಇಚ್ಛಿಸಿದರೆ ತಮ್ಮ ಪೋಷಕರ ಹತ್ತಿರ ಇರುವ ಮೊಬೈಲ್‌ ತೆಗೆದುಕೊಂಡು ಮಾತನಾಡಬಹುದು ಎಂದು ಹೇಳಿದೆ. ಆದರೆ ಇಂದಿನ ದಿನಗಳಲ್ಲೂ ಇಂತಹ ಆದೇಶದಿಂದ ಪ್ರಧಾನಿ ಮೋದಿಯವರ ಡಿಜಿಟಲ್‌ ಇಂಡಿಯಾ ಕನಸು ಎಷ್ಟರ ಮಟ್ಟಿಗೆ ನನಸಾಗುತ್ತದೆ ಎನ್ನುವುದು ದೇಶದ ಜನರ ಪ್ರಶ್ನೆಯಾಗಿದೆ.