ಲೈಫ್ ಸ್ಟೈಲ್

ಈ ಟ್ರಿಕ್ಸ್‌ ಅನುಸರಿಸಿದರೆ ನಿಮ್ಮ ಸ್ಮಾರ್ಟ್‌ಫೋನ್‌ ಬೇಗನೆ ಚಾರ್ಜ್‌ ಆಗತ್ತೆ

ಅನ್‌ಬ್ರಾಂಡೆಡ್‌ ಅಥವಾ ಬೇರೆ ಚಾರ್ಜರ್‌ ಬಳಕೆ ಮಾಡಬೇಡಿ :
ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾವಾಗಲೂ ನಿಮ್ಮದೇ ಚಾರ್ಜರ್‌ ಬಳಕೆ ಮಾಡಿ. ನಿಮ್ಮ ಮೊಬೈಲ್‌ ಜೊತೆ ಬಂದ ಚಾರ್ಜರ್‌ನಿಂದಲೇ ಚಾರ್ಜ್‌ ಮಾಡಿ.  ಅನ್‌ಬ್ರಾಂಡೆಡ್‌ ಅಥವಾ ಬೇರೆ ಚಾರ್ಜರ್‌ ಬಳಕೆ ಮಾಡಬೇಡಿ.  ಇದರಿಂದ ನಿಮ್ಮ ಪೋನ್‌ ಬೇಗನೆ ಚಾರ್ಜ್‌ ಆಗುವುದಿಲ್ಲ. ಅಲ್ಲದೇ ಮಲ್ಟಿ ಚಾರ್ಜರ್‌ ಇರುವ ಚಾರ್ಜರ್‌ ಬಳಕೆ ಸಹ ಮಾಡಲೇ ಬೇಡಿ.

ಬ್ಯಾಟರಿ ಖಾಲಿಯಾಗುವ ಮೊದಲು ಚಾರ್ಜ್‌ ಮಾಡಿ :
ಕೆಲವು ಜನರು ಅಂದುಕೊಂಡಿದ್ದಾರೆ ಮೊಬೈಲ್‌ನ್ನು ವಾರದಲ್ಲಿ ಒಂದು ಬಾರಿ ಪೂರ್ತಿ ಚಾರ್ಜ್‌ ಖಾಲಿ ಮಾಡಿ ನಂತರ ಪೂರ್ತಿ ಚಾರ್ಜ್‌ ಮಾಡಬೇಕು ಎಂದು. ಆದರೆ ಇದು ಸರಿಯಲ್ಲ. ಮೊಬೈಲ್‌ನಲ್ಲಿ ಪದೇ ಪದೇ ಚಾರ್ಜ್‌ ಖಾಲಿಯಾಗಿರುವಂತೆ ಮಾಡಬೇಡಿ. ಮೊಬೈಲ್‌ನಲ್ಲಿ ಕಡಿಮೆ ಎಂದರೆ 40 ರಿಂದ 80 ಶೇಕಡದಷ್ಟು ಚಾರ್ಜ್‌ ಇರಲೇಬೇಕು.

ಫೋನ್‌ನ್ನು ಚಾರ್ಜರ್‌ ಓನ್ಲಿ ಮೋಡ್‌ನಲ್ಲಿ ಚಾರ್ಜ್‌ ಮಾಡಿ :

ಜನರು ತಮ್ಮ ಚಾರ್ಜರ್‌ ಮರೆತು ಬಂದಾಗ ಹೆಚ್ಚಾಗಿ ಯುಎಸ್‌ಬಿ ಕೇಬಲ್‌ ಮೂಲಕ ಚಾರ್ಜ್‌ ಮಾಡುತ್ತಾರೆ. ಯುಎಸ್‌ಬಿ ಮೂಲಕ ಚಾರ್ಜ್‌ ಮಾಡುವಾಗ ಡಾಟಾ ಟ್ರಾನ್ಸ್‌ಫರ್‌ ಮಾಡಬೇಡಿ.  ಅದೇ ರೀತಿ ಫೋನ್‌ನ್ನು ಚಾರ್ಜರ್‌ ಓನ್ಲಿ ಮೋಡ್‌ನಲ್ಲಿ ಚಾರ್ಜ್‌ ಮಾಡಿ.

ಹಳೆ ಬ್ಯಾಟರಿ ಉಪಯೋಗ ಮಾಡಬೇಡಿ :
ನೀವು ನಿಮ್ಮ ಮೊಬೈಲ್‌ ಜೊತೆ ಬಂದ ಬ್ಯಾಟರಿಯನ್ನು ಒಂದು, ಎರಡು ಹೀಗೆ ವರ್ಷಗಟ್ಟಲೆ ಉಪಯೋಗ ಮಾಡುತ್ತೀರಿ. ಆದರೆ ನಿಮಗೆ ಗೊತ್ತೆ ಒಂದು ಬ್ಯಾಟರಿ ಕೇವಲ ಒಂದು ವರ್ಷದವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ ನಂತರ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆದುದರಿಂದ ಹಳೆ ಬ್ಯಾಟರಿ ಉಪಯೋಗ ಮಾಡಬೇಡಿ.

ಕಾಮನ್‌ ಚಾರ್ಜರ್‌ನಿಂದ ಬ್ಯಾಟರಿ ಚಾರ್ಜ್‌ ಮಾಡಬೇಡಿ :
ಮಾರ್ಕೆಟ್‌ನಲ್ಲಿ ಕಡಿಮೆ ಬೆಲೆಗೆ ಸಾವಿರಾರು ಚಾರ್ಜರ್‌ ಸಿಗುತ್ತದೆ. ಆದರೆ ಅದನ್ನು ಉಪಯೋಗಿಸುವುದು ತಪ್ಪು. ಇಂತಹ ಕಡಿಮೆ ಬೆಲೆ ಹಾಗೂ ಗುಣ ಮಟ್ಟದ ಚಾರ್ಜರ್‌ ಉಪಯೋಗ ಮಾಡುವುದರಿಂದ ಮೊಬೈಲ್‌ಗೆ ಬೇಗನೆ ಚಾರ್ಜ್‌ ಆಗುವುದಿಲ್ಲ.