ದೊಡ್ಡ ಸುದ್ದಿ ಸಿಟಿ ಸುದ್ದಿ ಹೊಸ ಸುದ್ದಿ

ಈ ಕಲ್ಲು ಸುಟ್ಟರೆ ವೈಫೈ ಸಿಗ್ನಲ್ ಸಿಗುತ್ತಂತೆ… ಹೇಗೆ?

ಹೌದು.., ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಕಲ್ಲು ಭಾರೀ ಸದ್ದು ಮಾಡುತ್ತಿದೆ. ಈ ಕಲ್ಲು ತನ್ನೊಳಗೆ ವೈಫೈ ಮಾರ್ಗಗಳನ್ನು ಬಚ್ಚಿಟ್ಟುಕೊಂಡಿದೆ. ಅಲ್ಲಿನ ನ್ಯೂಯೆನ್ ಕರ್ಜನ್ ಮ್ಯೂಸಿಯಂನಲ್ಲಿರುವ ಕಲ್ಲಿನ ಸುಟ್ಟರೆ ವೈಫೈ ಸಿಗ್ನಲ್ ಸಿಗುತ್ತದೆ. ಸುಮಾರು 1.5 ಟನ್‌ಗಳಷ್ಟು ಭಾರವಿರುವ ಈ ಕಲ್ಲು ಕಳೆದ ಕೆಲ ದಿನಗಳಿಂದ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿದೆ.

ಏನಿದು ರಹಸ್ಯ?
ಈ ವಿಶೇಷ ಕಲ್ಲಿನೊಳಗೆ ಥರ್ಮೋಎಲೆಕ್ಟ್ರಿಕ್ ಜನರೇಟರ್ ಶಕ್ತಿ ಇದೆ. ಶಾಖದಿಂದ ವಿದ್ಯುತ್  ಉತ್ಪಾದಿಸುವ ಶಕ್ತಿ ಈ ಕಲ್ಲಿಗಿದೆ. ಪರಿಣಾಮ ಈ ಕಲ್ಲನ್ನು ಸಣ್ಣ ಪ್ರಮಾಣದ ಬೆಂಕಿಯಲ್ಲಿ ಬಿಸಿ ಮಾಡಿದರೂ ಆ ಶಾಖಕ್ಕೆ ಇಲ್ಲಿ ವಿದ್ಯುತ್ ಆಗಿ ಪರಿವರ್ತನೆ ಆಗುತ್ತದೆ. ಹೀಗಾಗಿ, ಕಲ್ಲಿಗೆ ಬೆಂಕಿ ಹಚ್ಚಿದ ಕೂಡಲೇ ಇಲ್ಲಿ ವಿದ್ಯುತ್ ಪ್ರವಹಿಸಿ ವೈಫೈ ಮಾರ್ಗ ತೆರೆದುಕೊಳ್ಳುತ್ತದೆ.