ದೊಡ್ಡ ಸುದ್ದಿ ಸಿಟಿ ಸುದ್ದಿ

ಕಾರಿನಲ್ಲಿ ಡ್ರೈವಿಂಗ್‌ ಮಾಡ್ತಲೇ ಸೆಕ್ಸ್‌…ಭೀಕರ ಅಪಘಾತ!

ಹೌದು..ಕಾಮಾತುರ ಜೋಡಿಗಳಿಬ್ಬರು ಕಾರನ್ನು ಓಡಿಸಿಕೊಂಡೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದಾಗಲೇ ಭೀಕರ ಅಪಘಾತ ಸಂಭವಿಸಿ ಪುರುಷ ಯಮಲೋಕ ಸೇರಿದ್ರೆ, ಸ್ತ್ರೀ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ. ಉತ್ತರಪ್ರದೇಶದ ಪಿಲಿಭಿಟ್‌ ಬಳಿ ಈ ಘಟನೆ ಸಂಭವಿಸಿದೆ.

ಅಪಘಾತ ಸಂದರ್ಭದಲ್ಲಿ ಯುವಕ ಪ್ಯಾಂಟ್ ಮತ್ತು ಒಳ ಉಡುಪು ಮೊಣಕಾಲಿನಿಂದ ಕೆಳಗೆ ಇದ್ದವು. ಇದನ್ನ ಗಮನಿಸಿದ ಪೊಲೀಸರು ಕಾರಿನಲ್ಲಿ ಕಾಮಕಾಂಡ ನಡೆದಿದೆ ಎಂದು ಹೇಳಿದ್ದಾರೆ. ಜತೆಗೆ ಗಂಭೀರವಾಗಿ ಗಾಯಗೊಂಡಿರುವ ಆತನ ಗರ್ಲ್ ಫ್ರೆಂಡ್ ಮೈಮೇಲೂ ಟೀಶರ್ಟ್ ಬಟ್ಟೆಗಳು ಅರೆಬರೆಯಾಗಿದ್ದವು ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ
ಉತ್ತರಪ್ರದೇಶದ ಪಿಲಿಭಿಟ್‌‌ನಿಂದ ತನ್ನ ಗೆಳತಿ ಕರೆದುಕೊಂಡು ಕಾರಿನಲ್ಲಿ ತೆರಳುತ್ತಿದ್ದ 31 ವರ್ಷದ ಯುವಕ ಪಿಲಿಭಿಟ್-ಪೂರ್ನಾಪೂರ್‌ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಸೆಕ್ಸ್‌ ನಡೆಸುತ್ತಿದ್ದರು. ಆದರೆ ಅದರ ಭರದಲ್ಲಿ ಕಾರು ನಿಯಂತ್ರಣ ತಪ್ಪಿ   ಟ್ರಕ್‌‌ಗೆ ಗುದ್ದಿದೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರೇಯಸಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.