ಸಿಟಿ ಸುದ್ದಿ

15 ವರ್ಷಗಳ ಬಳಿಕ ನಾಗಮಂಡಲ ಸೇವೆ

ಪುತ್ತೂರು: ಒಂದೂವರೆ ದಶಕದ ಬಳಿಕ ಪುತ್ತೂರಿನಲ್ಲಿ ನಾಗಮಂಡಲ ನಡೆಯಲಿದ್ದು, ಮಾರ್ಚ್ 1ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರ ಮಾರು ಗದ್ದೆಯಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಶಾಸಕಿ ಶಕುಂತಳಾ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಬುಧವಾರ ಚಪ್ಪರ ಮುಹೂರ್ತ ನೆರವೇರಿಸಲಾಯಿತು.
ರಾಗಸುಧಾ ಪುತ್ತೂರು ಮತ್ತು ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ಇವರ ಜಂಟಿ ನೇತೃತ್ವದಲ್ಲಿ ಚತುಃಪವಿತ್ರ ನಾಗಮಂಡಲ ಸೇವೆ ನಡೆಯಲಿದೆ. 2001ರಲ್ಲಿ ಪುತ್ತೂರಿನಲ್ಲಿ ಮೊದಲ ಬಾರಿಗೆ ನಾಗಮಂಡಲ ನಡೆದಿದ್ದರೆ, ಇದೀಗ 15ವರ್ಷಗಳ ನಂತರ ಮತ್ತೊಮ್ಮೆ ನಡೆಯುತ್ತಿದೆ . ಐದು ವರ್ಷಗಳ ಹಿಂದೆ ಸಂಪ್ಯದಲ್ಲಿ ನಾಗಮಂಡಲ ಸೇವೆ ನಡೆದಿತ್ತು .