ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಭಾರತ- ಪಾಕ್ ತಂಡಗಳಿಗೆ ನಿಜಕ್ಕೂ ಇರುವ ಭಯ ಏನೂ ಗೊತ್ತಾ?

ಇಂದು ಭಾರತ-ಪಾಕ್ ತಂಡಗಳು ಬಾಂಗ್ಲಾದೇಶದ ಮೀರ್‌ಪುರ್‌ನ ಶೇರ್‌-ಎ-ಬಾಂಗ್ಲಾ ಅಂತಾರಾಷ್ಟ್ರೀಯ ಮೈದಾನದಲ್ಲಿ ಪರಸ್ಪರ ಎದುರಾಗಲಿವೆ. ಈಗಾಗಲೇ ಬಾಂಗ್ಲಾ ವಿರುದ್ಧ ಒಂದು ಪಂದ್ಯ ಗೆದ್ದು ಬೀಗುತ್ತಿರುವ ಬ್ಲೂ ಬಾಯ್ಸ್ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಟಿ-20 ಇತಿಹಾಸ ಕೆದುಕುತ್ತಾ ಹೋದರೆ, ಬಹುತೇಕ ಚುಟುಕು ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯ ಗಳಿಸಿದೆ. ಅದರಲ್ಲೂ 2007ರಲ್ಲಿ ದ.ಆಫ್ರಿಕಾದ ಜೋಹಾನ್ಸ್‌‌ಬರ್ಗ್‌‌ನಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯವನ್ನು ಭಾರತ ಅಂತಿಮ ಕ್ಷಣದಲ್ಲಿ ಗೆದ್ದುಕೊಂಡಿದ್ದು ಕ್ರಿಕೆಟ್ ಪ್ರೇಮಿಗಳು ಎಂದಾದರೂ ಮರೆಯುವುದುಂಟೇ?.

ಇದೀಗ ಏಷ್ಯಾ ಕಪ್ ಟಿ-20 ಪಂದ್ಯಾವಳಿಯಲ್ಲಿ ಇಂದು ಈ ಎರಡೂ ತಂಡಗಳು ಎದುರಾಗಲಿದ್ದು, ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳ ಹಾರ್ಟ್‌ಬೀಟ್ ಹೆಚ್ಚಾಗಲು ಕಾರಣವಾಗಿದೆ. ತಂಡವಾರು ಸಾಮರ್ಥ್ಯದತ್ತ ಗಮನ ಹರಿಸಿದರೆ ಭಾರತ ತಂಡ ಪಾಕ್ ತಂಡಕ್ಕಿಂತ ಉತ್ತಮ ಫಾರ್ಮ್‌ನಲ್ಲಿದ್ದು, ಮೊದಲ ಪಂದ್ಯ ಗೆದ್ದ ಹುಮ್ಮಸ್ಸು ಎದ್ದು ಕಾಣುತ್ತಿದೆ.

ಪಾಕ್‌ಗೆ ಇಂದಿನ ಪಂದ್ಯವೇ ಮೊದಲ ಪಂದ್ಯವಾಗಿದ್ದು, ಭಾರತದ ವಿರುದ್ಧ ಅಮೋಘ ಜಯ ಸಾಧಿಸುವ ತವಕದಲ್ಲಿದೆ. ಧೋನಿ ಪಡೆಯಲ್ಲಿ ಯುವ ಹಾಗೂ ಅನುಭವಿ ಆಟಗಾರರ ಮೀಳಿತವಿದ್ದು, ಪಾಕ್ ತಂಡದಲ್ಲಿ ಈ ಕೋ-ಆರ್ಡಿನೇಶನ್‌‌‌‌ನಲ್ಲಿ ಕೊಂಚ ಮಟ್ಟಿಗಿನ ಕೊರತೆ ಎದ್ದು ಕಾಣುತ್ತಿದೆ.

ಒಟ್ಟಿನಲ್ಲಿ ಇಂದಿನ ಪಂದ್ಯ ತೀವ್ರ ಕುತೂಹಲ ಹೊತ್ತು ತರುತ್ತಿದ್ದು, ಎರಡೂ ದೇಶಗಳಲ್ಲಿ ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ನಾಳಿನ ಪಂದ್ಯ ಇನ್ನಷ್ಟು ಮಹತ್ವ ಪಡೆಯಲು ಕಾರಣವೆನೆಂದರೆ 2015ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ-ಪಾಕ್ ತಂಡಗಳು ಎದುರಾಗಿದ್ದು ಬಿಟ್ಟರೆ, ಇಲ್ಲಿಯವರೆಗೂ ಈ ತಂಡಗಳು ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ.

ಅದೆನೆ ಇರಲಿ ಇಂದು ಮೀರ್‌ಪುರ್ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಉಂಟಾಗಲಿದ್ದು, ಭಾರತ-ಪಾಕ್ ತಂಡಗಳ ನಡುವಿನ ಈ ರೋಮಾಂಚನಕಾರಿ ಪಂದ್ಯದಲ್ಲಿ ಕ್ರಿಕೆಟ್ ಗೆಲ್ಲಲಿ ಎಂಬುದು ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳ ಆಶಯ ಎಂಬುದರಲ್ಲಿ ಎರಡು ಮಾತಿಲ್ಲ.