ಸಂಪಾದಕೀಯ

ಟಿಆರ್‌ಪಿಗಾಗಿ ಬಟ್ಟೆ ತೆಗೆದು ಬಿಸಾಡಿದ ಟಿವಿ ಆಂಕರ್

ಈ ಸ್ಪರ್ಧಾತ್ಮಕ ಯುಗದಲ್ಲಿ ಜನರು ಎಂತ ಹಾದಿ ತುಳಿಯಲು ಸಿದ್ಧರಾಗಿರುತ್ತಾರೆ. ತಮ್ಮ ಮಾಧ್ಯಮದ ಟಿಆರ್‌ಪಿ ಹೆಚ್ಚಳಕ್ಕಾಗಿ ಮತ್ತು ವೀಕ್ಷಕರನ್ನು ತಮ್ಮ ಚಾನೆಲ್‌ನತ್ತ ಸೆಳೆಯಲು ಈ ಒಂದು ಹೊಸ ಪ್ರಯೋಗ ಕೈಗೊಂಡಿದ್ದಾಳೆ ನಿರೂಪಕಿ.

ಜನರಿಗೆ `ಬಿಸಿ ಬಿಸಿ’ ಸುದ್ದಿ ಓದುವುದಲು ಅಲ್ಬೇನಿಯಾದ ಟಿವಿ ಮಾಧ್ಯಮವೊಂದು ಟಾಪ್‌ಲೆಸ್‌ ಆ್ಯಂಕರ್‌ನ್ನ ತೆರೆಯ ಮೇಲೆ ಕರೆ ತರುತ್ತಿದ್ದಾರೆ. ನ್ಯೂಸ್‌ ಚಾನೆಲ್‌ನ ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ಸಹ ದೊರೆತಿದೆ. ಇದರಿಂದಾಗಿ ಈ ಚಾನೆಲ್‌ ಅತಿ ವೇಗವಾಗಿ ಜನಪ್ರಿಯಗೊಳ್ಳುತ್ತಿದೆ.

ನಿರೂಪಿಕಿಯರು ನ್ಯೂಸ್‌ ಜಾಕೆಟ್‌ ಬಿಟ್ಟು ಒಳ ಉಡುಪು ಧರಿಸದೇ ಸುದ್ದಿಗಳನ್ನ ಓದುತ್ತಾರೆ. ಇದರಿಂದಾಗಿ ಜನರು ಆರ್ಕಷಿತಿಗೊಳ್ಳುತ್ತಿದ್ದು, ಕ್ರಮೇಣವಾಗಿ ಟಿಆರ್‌ಪಿ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ.

ರಾಜನೀತಿಯ ಒತ್ತಡ ಸಂಬಂಧ ವಾಸ್ತವಿಕ ಸುದ್ದಿಗಳು ಬೆಳಕಿಗೆ ಬರುತ್ತಿಲ್ಲ. ಅದಕ್ಕಾಗಿ ನಾವು ಇಂತಹ ಒಂದು ಸುದ್ದಿ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದೇವೆ. ಮಾಧ್ಯಮಗಳಲ್ಲಿ ಈ ರೀತಿಯ `ಬೆತ್ತಲೆ’ ಪ್ರಪಂಚದ ಸುದ್ದಿಗಳು ಹೊರಬೀಳುತ್ತವೆ ಎಂದು ಟಿವಿ ಮಾಲೀಕ ನ್ಯೂಸ್‌ ಏಜೆನ್ಸಿಯೊಂದಕ್ಕೆ ತಿಳಿಸಿದ್ದಾರೆ.

ನಾವು ಸೆಕ್ಸ್‌ ಮಾರಾಟ ಮಾಡುತ್ತಿಲ್ಲ. ಜನರಿಗೆ ಸುದ್ದಿ ಮುಟ್ಟಿಸುತ್ತಿದ್ದೇವೆ. ಇದು ಸಾಂಕೇತಿಕ ಪ್ರಚಾರವಷ್ಟೆ. ಇನ್ಮುಂದೆ ಇದೇ ರೀತಿ ಹಲವು ಚಾನೆಲ್‌ಗಲು ಪೈಪೋಟಿ ನಡೆಸಲಿವೆ ಎಂದು ತಿಳಿಸಿದರು.

ಈ ರೀತಿ ಸುದ್ದಿ ಓದುವುದರಿಂದ ನನ್ನ ಜೀವನವೇ ಬದಲಾಗಿದೆ ಎಂದು ನಿರೂಪಕಿ ತನ್ನ ಮನದಾಳ ಮಾತನ್ನು ಹೇಳಿದ್ದಾಳೆ. ಐದು ವರ್ಷಗಳಿಂದ ನಾನು ಮಾಧ್ಯಮದಲ್ಲಿ ಸುದ್ದಿಗಳನ್ನ ಓದುತ್ತಿದ್ದರೂ ಸಹ ನಾನು ಬೆಳಕಿಗೆ ಬರಲಿಲ್ಲ. ಆದ್ರೆ ಕಳೆದ ಮೂರು ತಿಂಗಳಿನಿಂದ ನಾನು ಓರ್ವ ಸ್ಟಾರ್‌ ನಟಿ ತರ ಪ್ರಚಾರ ಪಡೆದಿದ್ದೇನೆ ಎನ್ನುವುದು ಈ ಟಾಪ್‌ಲೆಸ್‌ ಅ್ಯಂಕರ್‌ ಸಂತಸದ ಮಾತು.

Tags