ದೊಡ್ಡ ಸುದ್ದಿ ಹೊಸ ಸುದ್ದಿ

ಇವೆಲ್ಲಾ ಲೈಂಗಿಕ ಕ್ರಿಯೆಯ ಕುರಿತಾದ ತಪ್ಪು ಕಲ್ಪನೆಗಳು…

ಸೆಕ್ಸ್ ಕುರಿತಾಗಿ ಸಾಮಾನ್ಯವಾಗಿ ಅನೇಕರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವ ಪ್ರಯತ್ನವನ್ನು ತಜ್ಞರು ಮಾಡಿದ್ದಾರೆ.

ಮೊದಲ ಮಿಲನದಲ್ಲೇ ಗರ್ಭ
ಮೊದಲ ಅಥವಾ ಒಂದೇ ಸಾರಿಯ ಮಿಲನದಿಂದ ಗರ್ಭಧಾರಣೆ ಆಗುವುದಿಲ್ಲ ಎಂಬ ಕಲ್ಪನೆ ಹಲವರಲ್ಲಿದ್ದು, ಇದು ಸುಳ್ಳು ಎಂದು ತಜ್ಞರು ಹೇಳುತ್ತಾರೆ. ಮೊದಲ ಅಥವಾ ಒಂದೇ ಬಾರಿ ಕೂಡುವಿಕೆಯಿಂದಲೂ ಗರ್ಭಧಾರಣೆ ಆಗುವ ಸಾಧ್ಯತೆ ಇದೆ ಎಂಬುದು ತಜ್ಞರ ಮಾತು.

ವಿರ್ಯಾಣು ಕುರಿತ ಭಾವನೆ
ಇನ್ನು ಸಂಭೋಗದ ವೇಳೆ ವೀರ್ಯಾಣು ಬಿಡುಗಡೆ ಕುರಿತು ಹಲವು ಪುರುಷರಲ್ಲಿ ತಪ್ಪು ಕಲ್ಪನೆಗಳಿದ್ದು, ತಮ್ಮ ವೀರ್ಯ ಬಿಡುಗಡೆಯ ವಿಧಾನದಿಂದ ಮಹಿಳೆಯರಲ್ಲಿ ಗರ್ಭಧಾರಣೆ ತಡೆಯಬಹುದಾಗಿದೆ ಎಂದು ತಿಳಿದಿದ್ದಾರೆ. ಆದರೆ ಈ ವೇಳೆ ವೀರ್ಯ ಬಿಡುಗಡೆ ವಿಧಾನ  ಯಾವುದೇ ಬಗೆಯದ್ದಾಗಿದ್ದರೂ, ಮಹಿಳೆ ಗರ್ಭವತಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸುತ್ತಾರೆ.

ಋತುಚಕ್ರದ ಸಂದರ್ಭ
ಇನ್ನು ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಗರ್ಭವತಿ ಆಗೋದಿಲ್ಲ ಎಂಬುದು ಕೂಡ ಸುಳ್ಳು. ಗರ್ಭಧಾರಣೆಗೂ ಋತುಚಕ್ರಕ್ಕೂ ಸಂಬಂಧವಿಲ್ಲ.

ಭಂಗಿ
ಅಲ್ಲದೇ ಕೇವಲ ಮಲಗಿಕೊಂಡು ಸೆಕ್ಸ್ ಮಾಡಿದರೆ ಮಾತ್ರ ಗರ್ಭವತಿ ಆಗಲು ಸಾಧ್ಯ ಎಂಬುದು ಸುಳ್ಳು. ಯಾವುದೇ ಭಂಗಿಯಲ್ಲಿ ಕೂಡಿದರೂ ಗರ್ಭಧಾರಣೆ ಸಾಧ್ಯ ಎಂದು ಲೈಂಗಿಕ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಓರಲ್ ಸೆಕ್ಸ್
ವಿಚಿತ್ರ ಅಂದ್ರೆ ಓರಲ್ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವುದರಿಂದಲೂ ಗರ್ಭಧಾರಣೆ ಆಗುತ್ತದೆ ಎಂಬ ಭಯ ಕೆಲವರಲ್ಲಿದೆ. ಆದರೆ ಇದು ಸಾಧ್ಯವಿಲ್ಲದ ಮಾತು.

ಕಾಂಡೋಮ್ ಮರುಬಳಕೆ
ಕಾಂಡೋಮ್‌‌‌ಗಳ ಮರುಬಳಕೆಯನ್ನು ನಿಲ್ಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.  ಕಾಂಡೋಮ್‌‌ಗಳ ಮರುಬಳಕೆಯಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿದ್ದಾರೆ.