ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಈ ಟ್ವಿನ್ ಸಿಸ್ಟರ್‌‌‌‌ಗಳ ಬಾಡಿ ಬಿಲ್ಡಿಂಗ್ ಹುಚ್ಚಿಗೆ ಘಟಾನುಘಟಿಗಳೇ ಬೆಚ್ಚಿದರು!

ಲಂಡನ್: ಈ ಅವಳಿ ಸಹೋದರಿಯರು ನೋಡಲು ಅದೆಷ್ಟು ಸುಂದರಿಯರೋ, ಕಸರತ್ತಿನ ವಿಷಯಕ್ಕೆ ಬಂದರೆ ಘಟಾನುಘಟಿ ಬಾಡಿ ಬಿಲ್ಡರ್ಸ್‌‌‌‌‌ಗಳನ್ನು ಮಣ್ಣು ಮುಕ್ಕಿಸುವ ಛಾತಿ ಇರುವವರು.

ಲಂಡನ್‌‌ನ ಜೆನಿ ಹಾಗೂ ಲೂನಿ ಎಂಬ 29 ವರ್ಷದ ಅವಳಿ ಸಹೋದರಿಯರು ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಬಾಡಿ ಬಿಲ್ಡಿಂಗ್‌‌‌‌ ಮೂಲಕ ಖ್ಯಾತನಾಮ ರೆಸ್ಲರ್‌‌‌ಗಳನ್ನು ಹಿಂದಿಕ್ಕಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಜೆನಿ ಕಳೆದ ಎರಡು ವರ್ಷಗಳಿಂದ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದರೆ, ಲೂನಿ ಕಳೆದ ಒಂದು ವರ್ಷದಿಂದ ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಈ ಇಬ್ಬರೂ ಅವಳಿ ಸಹೋದರಿಯರು ದಿನದ 12 ಗಂಟೆ ಜಿಮ್‌‌ನಲ್ಲಿ ಕಸರತ್ತು ಮಾಡುತ್ತಾರೆ. ಅಲ್ಲದೇ ನ್ಯಾಶನಲ್ ಅಮೆಚೂರ್ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್‌‌ ಆಯೋಜಿಸುವ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.