ದೊಡ್ಡ ಸುದ್ದಿ

ಮುಸ್ಲಿಂ ಗಂಡಸರು 4 ಮದುವೆ ಆಗಬಹುದಾದ್ರೆ… ಹೆಂಗಸರೇನು ಪಾಪಿಗಳಾ?

ಇದು ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಬಿ ಕಮಲ್ ಪಾಷಾ ಪ್ರಶ್ನೆ.
ಭಾನುವಾರ ಕೋಝಿಕೋಡೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ವಕೀಲರ ಎನ್‌ಜಿಒ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಬಿ ಕಮಲ್ ಪಾಷಾ ಮಾತನಾಡಿದ್ರು.

ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ  ಪುರುಷರು ನಾಲ್ಕು ಮದುವೆಯಾಗಲು ಅವಕಾಶವಿದೆ. ಬಹಳಷ್ಟು ಮುಸ್ಲಿಂ ದೇಶಗಳು ಬಹುಪತ್ನಿತ್ವ, ಬಹುಪತಿತ್ವಗಳನ್ನು ನಿಷೇಧಿಸಿವೆ. ಆದರೆ ಭಾರತದಲ್ಲಿ ಈಗಲೂ ಇದು ಮುಂದುವರಿದಿರುವುದು ದುರಂತ ಎಂದು ಪಾಷ ಅಭಿಪ್ರಾಯಪಟ್ಟರು.

ಮುಸ್ಲಿಮರ ವೈಯಕ್ತಿಕ ಕಾನೂನುಗಳು ಸ್ತ್ರಿ ದ್ವೇಷಿಯಾಗಿವೆ ಎಂದು ಆರೋಪಿಸಿದ ನ್ಯಾಯಮೂರ್ತಿ ಪಾಷಾ ಮುಸ್ಲಿಮ್ ಧಾರ್ಮಿಕ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಮುಂದಾದ್ರೂ ಮುಸ್ಲಿಂ ಧರ್ಮದ ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಸಮಾನ ನಾಗರಿಕ ಸಂಹಿತೆ ಜಾರಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಪಾಷಾ ಹೇಳಿದರು.