ಕ್ರೀಡಾ ಸುದ್ದಿ ದೊಡ್ಡ ಸುದ್ದಿ

1 ಬಾಲ್‌ಗೆ 20 ರನ್‌…ಆಸ್ಟ್ರೇಲಿಯಾ ಆಟಗಾರ ಗಳಿಸಿದ್ದೇಗೆ?

ನೀವು ನಂಬ್ತೀರೋ ಇಲ್ಲವೋ ಗೊತ್ತಿಲ್ಲ.. ಬ್ಯಾಟ್ಸಮನ್‌ವೊಬ್ಬರು ಒಂದೇ ಎಸೆತಕ್ಕೆ 20 ರನ್‌ ಗಳಿಸಿದ್ದಾರೆ. ಇಷ್ಟಕ್ಕೂ ಆ ಬ್ಯಾಟ್ಸ್‌ಮನ್ ಯಾರು…ಯಾವ ದೇಶದ ಆಟಗಾರ ಗೊತ್ತಾ?ಆ ಆಟಗಾರ ಆಸ್ಟ್ರೇಲಿಯಾದ ಟ್ರಾವಿಸ್ ಬರ್ಟ್‌. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್‌ ಬಾಶ್‌ ಲೀಗ್‌ ಟಿ-20  ಪಂದ್ಯದಲ್ಲಿ ಹೊಬರ್ಟ್‌ ಹುರ್ರಿಕ್ಯಾನೇಸ್‌ ಮತ್ತು ಮೆಲ್ಬೋರ್ನ್‌ ಸ್ಟಾರ್ಸ್‌ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಕ್ಲಿಂಟ್‌ ಮೆಕ್ಕೇ ಅವರ 4.4 ನೇ ಎಸತಕ್ಕೆ ಟ್ರಾವಿಸ್ ಬರ್ಟ್‌ ಎರಡು ನೋ ಬಾಲ್‌ ಒಳಗೊಂಡಂತೆ ಒಟ್ಟು 3 ಸಿಕ್ಸ್‌ ಬಾರಿಸುವ ಮೂಲಕ 20 ರನ್‌ ಹೊಡೆದಿದ್ದಾರೆ. ಟ್ರಾವಿಸ್‌ ಬರ್ಟ್‌ ಈ ಪಂದ್ಯದಲ್ಲಿ ಅತೀ ವೇಗವಾಗಿ ಅಂದ್ರೆ 22 ಎಸೆತಕ್ಕೆ 50 ರನ್‌ ಗಳಿಸಿದ್ದಾನೆ.

ಪಂದ್ಯದ ಕೊನೆಯ ಸಮಯದಲ್ಲಿ ತನ್ನ ತಂಡವನ್ನ ಗೆಲ್ಲಿಸುವ ಸಂಬಂಧ ಪ್ರತಿಯೊಬ್ಬ ಆಟಗಾರ ರೋಚಕ ಆಟವಾಡುವುದು ಸರ್ವೇ ಸಾಮನ್ಯ. ಆದ್ರೆ ಈ ಎಡಗೈ ಬ್ಯಾಟ್ಸ್‌‌ಮನ್‌ ಟ್ರಾವಿಸ್ ಬರ್ಟ್ ಸೋಲಿನ ಅಂಚಿನಲ್ಲಿದ್ದ ತನ್ನ ತಂಡವನ್ನು ಒಂದೇ ಎಸೆತಕ್ಕೆ 20 ರನ್‌ ಗಳಿಸಿ ಪಂದ್ಯವನ್ನು ಡ್ರಾ ಆಗುವಂತೆ ಮಾಡಿದ್ದಾನೆ.