ಜಾಬ್ ಜಂಕ್ಷನ್

ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯಲ್ಲಿ ಕೆಲಸವಿದೆ

ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಯಲ್ಲಿ 659 ಜೂನಿಯರ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವಾಗಿ ಬಂಕೂರಾ ಹಾಗೂ ಪುರೋಲಿ ಪ್ರದೇಶಗಳಲ್ಲಿ ಕೆಲಸ ಮಾಡಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: 8ನೇ ತರಗತಿ ಪಾಸ್ ಮಾಡಿದವರು ಸಾಕು.

ವಯಸ್ಸು: 18ರಿಂದ 27 ವಯಸ್ಸು ಅಗತ್ಯ.

ಆಯ್ಕೆಯ ವಿಧಾನ: ಮೆರಿಟ್ ಆಧಾರದಲ್ಲಿ ನಡೆಯುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 11 ಏಪ್ರಿಲ್ 16

ಹೆಚ್ಚಿನ ಮಾಹಿತಿಗೆ : http://policewb.gov.in

………………………

* ಕೊಂಕಣ ರೈಲ್ವೆ ಇಲಾಖೆಯಲ್ಲಿ 25 ಹುದ್ದೆಗಳಿವೆ

ಕೊಂಕಣ್ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್(ಕೆಆರ್‌ಸಿಎಲ್)ನಲ್ಲಿ 25 ಗೂಡ್ಸ್ ಗಾರ್ಡ್ ಹಾಗೂ ಟ್ರ್ಯಾಕ್‌ಮ್ಯಾನ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷವಾಗಿ ಇದಕ್ಕೆ ಎಸ್‌ಸಿ ಹಾಗೂ ಎಸ್‌ಟಿ  ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಹುದ್ದೆಯ ವಿವರ: ಗೂಡ್ಸ್ ಗಾರ್ಡ್ 10

ವೇತನ ಶ್ರೇಣಿ: 5200 ರಿಂದ 20,200

ಟ್ರ್ಯಾಕ್‌ಮ್ಯಾನ್ 15 ಹುದ್ದೆ

ವೇತನಶ್ರೇಣಿ: 5200 ರಿಂದ 20,200

ವಿದ್ಯಾರ್ಹತೆ: ದೇಶದ ಯಾವುದೇ ವಿವಿಯಿಂದ ಪದವಿ ಪಡೆದಿರಬೇಕು. ಆದರೆ ಟ್ರ್ಯಾಕ್‌ಮ್ಯಾನ್‌ಗೆ ೧೦ನೇ ತರಗತಿ ಪಾಸ್/ ಐಟಿಐ ಅಥವಾ ಸಂಬಂಧಿತ ಯಾವುದೇ ಕೋರ್ಸ್ ಮಾಡಿದ್ದಾರೆ ಸಾಕು.

ವಯಸ್ಸು:  ಗಾರ್ಡ್‌ಗಳಿಗೆ 18ರಿಂದ 4೦

ಟ್ರ್ಯಾಕ್‌ಮ್ಯಾನ್ 18 ರಿಂದ 30

ಕೊನೆಯ ದಿನ: 5 ಏಪ್ರಿಲ್ 16

ಅರ್ಜಿ ಸಲ್ಲಿಸುವುದು ಹೇಗೆ: ಅಭ್ಯರ್ಥಿ ಭರ್ತಿ ಮಾಡಿದ ಅರ್ಜಿ ಜತೆಯಲ್ಲಿ  ಪಾರ್ಸ್‌ಪೋರ್ಟ್ ಭಾವಚಿತ್ರ, ಶಿಕ್ಷಣಕ್ಕೆ ಸಂಬಂಧಪಟ್ಟ ದಾಖಲೆಗಳ ಜತೆಯಲ್ಲಿ ಅಸಿಸ್ಟೆಂಟ್ ಪರ್ಸನಲ್ ಆಫೀಸರ್( ರಿಕ್ರ್ಯೂಮೆಂಟ್) ಕೊಂಕಣ್ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್, ಬೇಲಾಪುರ್ ಭವನ್, ಸಿಇಸಿ-೧೧, ಸಿಬಿಡಿ ಬೇಲಾಪುರ್, ನವೀ ಮುಂಬಯಿ-400614.

…………………

* ಜಾರ್ಖಂಡ್ ಊರ್ಜಾ ವಿಕಾಸ್ ನಿಗಮದಲ್ಲಿ 484  ಹುದ್ದೆ

ಜಾರ್ಖಂಡ್ ಊರ್ಜಾ ವಿಕಾಸ್ ನಿಗಮ್ ಲಿಮಿಟೆಡ್( ಜೆಯುವಿಎನ್‌ಎಲ್) 484 ಅಸಿಸ್ಟೆಂಟ್ ಆಪರೇಟರ್, ಸಿಬಿಒ, ಜೂನಿಯರ್ ಲೈನ್‌ಮನ್ ಹಾಗೂ ಫಿಟ್ಟರ್ ವೃತ್ತಿಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗದ ವಿವರ:

ಅಸಿಸ್ಟೆಂಟ್ ಆಪರೇಟರ್ 37 ಹುದ್ದೆಗಳು, ಸಿಬಿಒ ಗ್ರೇಡ್-1ನಲ್ಲಿ  226 ಹುದ್ದೆ, ಜೂನಿಯರ್ ಲೈನ್‌ಮನ್- 212 ಹುದ್ದೆ,  ಫಿಟ್ಟರ್ ಗ್ರೇಡ್-1- 9 ಹುದ್ದೆಗಳು.

ವಿದ್ಯಾರ್ಹತೆ: ಅಸಿಸ್ಟೆಂಟ್ ಆಪರೇಟರ್ ಹಾಗೂ ಸಿಬಿಒ ಗ್ರೇಡ್-1ಗೆ ಟ್ರೇಡ್ ಸರ್ಟಿಪಿಕೇಟ್ ಅಥವಾ ಐಟಿಐ ಕಲಿತುಕೊಂಡಿರಬೇಕು. ಜೂನಿಯರ್ ಲೈನ್‌ಮನ್ ಹಾಗೂ ಫಿಟ್ಟರ್ ಗ್ರೇಡ್-1ಗೆ ಐಟಿಐ ಅಥವಾ ಇದಕ್ಕೆ ಸಂಬಂಧಿತ ಕೋರ್ಸ್.

ವಯಸ್ಸು: 35 ವರ್ಷ, ಬಿಸಿ1 ಹಾಗೂ ಬಿಸಿ-11: 37 ವರ್ಷ, ಮಹಿಳೆಯರಿಗೆ- 38ವರ್ಷ, ಎಸ್‌ಸಿ/ಎಸ್‌ಟಿಗಳಿಗೆ 40 ವರ್ಷದ ಸಡಿಲಿಕೆ ಇದೆ.

ಕೆಲಸದ ವ್ಯಾಪ್ತಿ: ಜಾರ್ಖಂಡ್

ಕೊನೆಯ ದಿನ: 9 ಏಪ್ರಿಲ್16

ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ:     www.juvnl.org.in

……………

*ಏರ್ ಇಂಡಿಯಾದಲ್ಲಿ ಕೆಲಸವಿದೆ

ಏರ್ ಇಂಡಿಯಾ ಲಿಮಿಟೆಡ್‌ನಲ್ಲಿ  ತಾತ್ಕಾಲಿಕ ನೆಲೆಯಲ್ಲಿ 137 ಸೆಕ್ಯುರಿಟಿ ಏಜೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗದ ವಿವರ: 137 ಸೆಕ್ಯುರಿಟಿ ಏಜೆಂಟ್ ಹುದ್ದೆ. ವೇತನ ಶ್ರೇಣಿ 14,180( ತಿಂಗಳಿಗೆ) ದೇಶದ ಯಾವುದೇ ಪ್ರದೇಶ.

ವಿದ್ಯಾರ್ಹತೆ: ದೇಶದ ಯಾವುದೇ ವಿವಿಯಿಂದ ಪದವಿ ಅಗತ್ಯ. ಇದರ ಜತೆಯಲ್ಲಿ ಹಿಂದಿ, ಇಂಗ್ಲೀಷ್, ಪ್ರದೇಶಕ್ಕೆ ಸಂಬಂಧಪಟ್ಟ ಪ್ರಾದೇಶಿಕ ಭಾಷೆಗಳ ಅರಿವು ಅಗತ್ಯ. ವಯಸ್ಸು: 28 ವರ್ಷ(1.3.2016) ಆದರೆ ಒಬಿಸಿಗೆ ೩ ವರ್ಷ ಹಾಗೂ ಎಸ್‌ಸಿ/ಎಸ್‌ಟಿಗಳಿಗೆ 5 ವರ್ಷ ಸಡಿಲಿಕೆ ಇದೆ.

ಕೊನೆಯ ದಿನ: 4 ಏಪ್ರಿಲ್ 16

ಹೆಚ್ಚಿನ ಮಾಹಿತಿಗೆ :    http://www.airindia.in/careers.htm

……………………..

 

*ಸಿಬಿಐನಲ್ಲೂ 74 ಹುದ್ದೆಗಳು ಖಾಲಿ ಇದೆ

ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್‌ನಲ್ಲಿ  ತಾತ್ಕಾಲಿಕ ನೆಲೆಯಲ್ಲಿ 74 ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗದ ವಿವರ:  ತಾತ್ಕಾಲಿಕ ನೆಲೆಯಲ್ಲಿ 74 ಇನ್ಸ್‌ಪೆಕ್ಟರ್ ಹುದ್ದೆ, 40 ಸಾವಿರ ತಿಂಗಳ ವೇತನ. ದೇಶದ ಯಾವುದೇ ವಿವಿಯಿಂದ ಪದವಿ ಪಡೆದಿರಬೇಕು. ಇದರ ಜತೆಯಲ್ಲಿ  10 ವರ್ಷಗಳ ಕಾಲ ಪೊಲೀಸ್ ತನಿಖಾ ತಂಡ ಅಥವಾ ಖಾಸಗಿ ಪತ್ತೆದಾರಿಕೆಯಲ್ಲಿ ಕೆಲಸ ಮಾಡಿರಬೇಕು.  ದೇಶದ ಯಾವುದೇ ಮೂಲೆಯಲ್ಲೂ ಕೆಲಸ ಮಾಡಲು ಸಿದ್ಧರಿರಬೇಕು. ಮೂಲ ದಾಖಲಾತಿಗಳ ಜತೆಯಲ್ಲಿ ಅರ್ಜಿ ಹಾಕಬೇಕು.

ಕೊನೆಯ ದಿನ: 6 ಏಪ್ರಿಲ್ 16

ಹೆಚ್ಚಿನ ಮಾಹಿತಿಗೆ: http://www.cbi.nic.in

….

*ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ 246  ಹುದ್ದೆಗಳು

ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ 246 ಕಾನ್ಸ್‌ಸ್ಟೇಬಲ್( ಬ್ಯಾಂಡ್) ಹಾಗೂ ರೈಲ್ವೆ ಭದ್ರತೆ ಪಡೆ/ ರೈಲ್ವೆ ವಿಶೇಷ ಭದ್ರತಾ ಪಡೆಯಲ್ಲಿ ಹುದ್ದೆಗಳು ಖಾಲಿ ಇದೆ. ಇದಕ್ಕೆ ಅರ್ಹವಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆರ್ಹತೆ: 123  ಹುದ್ದೆಗಳು( ಸಾಮಾನ್ಯ ಪುರುಷ) ಹಾಗೂ 14 ಸಾಮಾನ್ಯ ಮಹಿಳೆಯರಿಗೆ ಮೀಸಲು. 50 ಒಬಿಸಿ ಪುರುಷ ಹಾಗೂ 6 ಒಬಿಸಿ ಮಹಿಳೆ, 26 ಎಸ್‌ಸಿ ಪುರುಷ ಹಾಗೂ 3 ಎಸ್‌ಸಿ ಮಹಿಳೆ, 22 ಎಸ್‌ಟಿ ಪುರುಷ ಹಾಗೂ 2 ಎಸ್‌ಟಿ ಮಹಿಳೆಯರಿಗೆ ಮೀಸಲು.

ವಿದ್ಯಾರ್ಹತೆ: ಹತ್ತನೇ ತರಗತಿ ಪಾಸ್ ಅಥವಾ ಇದಕ್ಕೆ ಸಂಬಂಧಪಟ್ಟಂತೆ ಇತರ ಕೋರ್ಸ್‌ಗಳನ್ನು ಮಾಡಿರಬೇಕು. 18ರಿಂದ 25 ವರ್ಷ ವಯಸ್ಸು ಅಗತ್ಯ. ಇದರಲ್ಲಿ ಒಬಿಸಿಗೆ 3 ವರ್ಷ, ಎಸ್‌ಸಿ/ಎಸ್‌ಟಿಗಳಿಗೆ 5 ವರ್ಷ ಸಡಿಲಿಕೆ ಇದೆ.

ಕೊನೆಯ ದಿನ: 11 ಏಪ್ರಿಲ್ 16

ಹೆಚ್ಚಿನ ಮಾಹಿತಿಗೆ:   http://www.ecr.indianrailways.gov.in