ದೊಡ್ಡ ಸುದ್ದಿ ಹೊಸ ಸುದ್ದಿ

ಪಾಠ ಮಾಡುತ್ತಿದ್ದ ಶಿಕ್ಷಕಿಗೆ ಕ್ಲಾಸ್‌‌‌ರೂಂನಲ್ಲೇ ಮುತ್ತಿಕ್ಕಿದ ಪಾಗಲ್ ಆಶಿಕ್!

ಇದು ಉತ್ತರಪ್ರದೇಶದ ಬದೋಹಿಯ ಪ್ರಾಥಮಿಕ ಶಾಲೆಯೊಂದರಲ್ಲಿ ನಡೆದ ಘಟನೆ. ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಏಕಾಏಕಿ ಕ್ಲಾಸ್‌‌ರೂಂ ಗೆ ನುಗ್ಗಿದ ಸಂಜಯ್ ಎಂಬ ಯುವಕ, ಆಕೆಯನ್ನು ಬರಸೆಳೆದು ಮುತ್ತಿಕ್ಕಿದ್ದಲ್ಲದೇ ಸ್ಥಳದಲ್ಲೇ ಮದುವೆಯಾಗುವ ಪ್ರಸ್ತಾವನೆ ಇಟ್ಟ.
ಶಿಕ್ಷಕಿ ವಿವಾಹಿತೆಯಾಗಿದ್ದು ಯುವಕನ ಈ ಅಸಭ್ಯ ವರ್ತನೆಯಿಂದ ಬೆಚ್ಚಿ ಬಿದ್ದಿದ್ದಾಳೆ. ಇದೇ ವೇಳೆ ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಹೇಳಿ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಯುವಕನ ಈ ಬೆದರಿಕೆಯಿಂದ ಗಾಬರಿಗೊಂಡ ಶಿಕ್ಷಕಿ ಈ ಕುರಿತು ಗಂಡನ ಬಳಿ ಹೇಳದೇ ಎರಡು ದಿನಗಳಿಂದ ಯಾತನೆ ಅನುಭವಿಸಿಸದ್ದಾಳೆ.

ಆದರೆ ಎರಡು ದಿನಗಳ ಬಳಿಕ ಗಂಡನಿಗೆ ಈ ವಿಷಯ ತಿಳಿಸಿದ ಶಿಕ್ಷಕಿ, ಗಂಡನ ಸಮೇತ ಪೊಲೀಸ್ ಠಾಣೆಗೆ ಬಂದು ಸಂಜಯ್‌‌‌ ವಿರುದ್ಧ ದೂರು ದಾಖಲಿಸಿದ್ದಾಳೆ. ಶಿಕ್ಷಕಿ ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು, ನಾಪತ್ತೆಯಾಗಿರುವ ಸಂಜಯ್‌‌‌‌ಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.