ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಫ್ಯಾನ್’ಗೆ ಜಾಬ್ ಆಫರ್..ಶಾರೂಖ್ ಮನಗೆದ್ದ ಅಭಿಮಾನಿ ಮಾಡಿದ್ದೇನು ?

ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜಗತ್ತಿನಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಶಾರುಖ್‌ನ ಬಹು ನಿರೀಕ್ಷಿತ ಚಿತ್ರ ಫ್ಯಾನ್. ಈ ಚಿತ್ರದಲ್ಲಿ ಶಾರುಖ್ ದ್ವಿಪಾತ್ರದಲ್ಲಿ ನಟಿಸಿದ್ದು, ಅಭಿಮಾನಿಯೊಬ್ಬನ ಕಥೆ ಹೇಳುವ ಚಿತ್ರವಾಗಿದೆ ಇದು.

ಫ್ಯಾನ್ ಚಿತ್ರದ ಟ್ರೈಲರ್ ಈಗಾಗಲೇ ಬಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದು, ಶಾರುಖ್ ಅಭಿಮಾನಿಯೊಬ್ಬ ಈ ಟ್ರೈಲರ್‌ನ್ನೇ ಪುನರ್ ಸೃಷ್ಟಿಸಿದ್ದನು. ಫ್ಯಾನ್ ಚಿತ್ರದಲ್ಲಿರುವ ಗೌರವ್ ಚನ್ನಾ ಎಂಬ ಪಾತ್ರವನ್ನು ಬದಲಿಸಿ ಅದರಲ್ಲಿ ಶಿವಂ ಜೆಮಿನಿ ಎಂಬ ವಿಎಫ್‌ಎಕ್ಸ್  ಕಲಾವಿದ ಜೀವ ತುಂಬಿದ್ದನು. ಅಭಿಮಾನಿಯೇ ತಯಾರಿಸಿದ ಈ ಹೊಸ ಫ್ಯಾನ್ ಟ್ರೈಲರ್‌ನ್ನು ನೋಡಿ ಖುಷಿಯಾದ ಶಾರುಖ್,  ಶಿವಂ ಅವರಿಗೆ ತನ್ನ ಕಂಪನಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.

ಟ್ರೈಲರ್ ನೋಡಿದ ಶಾರುಖ್, ಚೆನ್ನಾಗಿ ಮಾಡಿದ್ದೀರಿ..ನೀವೂ ನಮ್ಮ ಜತೆ ಕೆಲಸ ಮಾಡಲು ಬನ್ನಿ ಎಂದು ಟ್ವೀಟ್ ಮಾಡಿದ್ದಾರೆ.