ದೊಡ್ಡ ಸುದ್ದಿ ಲೈಫ್ ಸ್ಟೈಲ್ ಹೆಲ್ತ್ ಪ್ಲಸ್ ಹೊಸ ಸುದ್ದಿ

ಮಹಿಳೆಯರಿಗೆ ಈ ಏಳು ಬಗೆಯ ಗಂಡಸರು ತುಂಬಾ ಇಷ್ಟವಂತೆ!

ಅರೇ ಈ ಹೆಂಗಸರಿಗೆ ಯಾವ ತರಹದ ಗಂಡಸರು ಇಷ್ಟವಾಗ್ತಾರಪ್ಪ ಅಂತ ಪುರಷರು ತಲೆ ಕೆಡಿಸಿಕೊಳ್ಳುತ್ತಾರೆ. ನಿಮ್ಮದು ಇದೇ ಪರಿಸ್ಥಿತಿ ಇದ್ದರೆ ಕೊಂಚ ರಿಲ್ಯಾಕ್ಸ್‌ ಆಗಿ. ಏಕೆಂದರೆ ನಾವು ನಿಮಗೆ ಹುಡಿಗಯರ ಮನದಲ್ಲಿ ಎಂತಹ ಹುಡುಗರು ಮನೆ ಮಾಡಿರುತ್ತಾರೆ ಅಂತ ತಿಳಿಸುತ್ತೇವೆ.

 

ಒಮ್ಮೊಮ್ಮೆ ಹುಡುಗರು ಅಥವಾ ಗಂಡಸರು ಬರಿ ಹುಡುಗಿಯರ ಜೊತೆನೇ ಕಾಲ ಕಳಿಯುತ್ತಿರುತ್ತಾರೆ. ಇದು ಹುಡುಗಿಯರಿಗೆ ಅಥವಾ ಮಹಿಳೆಯರಿಗೆ ಬಹಳ ಇಷ್ಟವಾಗುತ್ತೆ. ಆದ್ರೆ ಎಲ್ಲ ಗಂಡಸರು ಅಥವಾ ಹುಡುಗರು ಇದನ್ನ ಹೇಗೆ ಮ್ಯಾನೇಜ್‌ ಮಾಡ್ತಾರೆ..?  ಅವರ ಮಾತನಾಡುವ ಶೈಲಿಗೆ ಹುಡುಗಿಯರಿಗೆ ಫಿದಾ ಆಗ್ತಾರಾ..? ಹುಡುಗಿಯರನ್ನ ಇಂಪ್ರೆಸ್‌ ಮಾಡೋಕೆ ಬರುತ್ತಾ..? ಏನೀದು ದೇವರು ಕೊಟ್ಟ ವರವೇ..?

 

ಈ ಕೆಳಗಿನ ಲೇಖನದಲ್ಲಿ ನಾವು ನಿಮಗೆ ಏಳು ಬಗೆಯ ಪುರಷರ ಬಗ್ಗೆ ತಿಳಿಸುತ್ತಿದ್ದೇವೆ. ಇವು ಫ್ರಾಕ್ಸ್‌ ನ್ಯೂಸ್‌ ವರದಿ ಆಧಾರಿತ. ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಯಾವ ತರಹದ ಹುಡುಗರು ಇಷ್ಟವಾಗ್ತಾರೆ ಎಂಬುದು ಬಹುಶಃ ಇವು ನಿಮಗೆ ಸಹಾಯ ಮಾಡಬಹುದು.

 

 

ಬುದ್ಧಿವಂತರು:

 

ಬುಂದ್ಧಿವಂತರನ್ನ ಕಂಡರೆ ಹುಡುಗಿಯರು ಫುಲ್‌‌ ಫಿದಾ ಆಗ್ತಾರೆ. ಏಕೆಂದರೆ ಅವರ ಹತ್ತಿರ ಬಹಳಷ್ಟು ಪ್ರಶ್ನೆಗೆ ಉತ್ತರ ಸಿಗ್ತಾವೆ. ಬುದ್ಧಿವಂತ ಹುಡಗರ ಹತ್ತಿರ ಸಕಾರಾತ್ಮಕ ಉತ್ತರ ಸಿಗೋದರಿಂದ ಹುಡುಗಿಯರಿಗೆ ಬಹಳಷ್ಟು ಇಷ್ಟವಾಗ್ತಾರೆ. ಜಾಣ ಹುಡುಗರು ಒಂದು ಗಂಟೆ ಬೇಜಾರಾಗದೆ ಮಾತನಾಡಿದರೆ ಸಾಕು ಹುಡುಗಿಯರ ದಿಲ್‌ನಲ್ಲಿ ಅವರ ಫೋಟೋ ಫಿಕ್ಸ್‌ ಅಂತ ತಿಳ್ಕೊಂಡುಬಿಡಿ. ಬುದ್ಧಿವಂತ ಹುಡುಗರು ಹುಡುಗಿಯರ ಜೊತೆ ಸಂಬಂಧ ಬೇಳಸಬೇಕಂದ್ರೆ ಅವರ ಬುದ್ಧಿ ಒಂದು ರೈಲ್‌ ತರ ಓಡುತ್ತಿರುತ್ತೆ. ಬುದ್ಧಿವಂತರು ಹುಡುಗಿಯರ ಜೊತೆ ಸಂಬಂಧ ನಿಭಾಯಿಸುತ್ತಲೇ ಹೃದಯವನ್ನ ಗೆಲ್ಲುತ್ತಾರೆ.

 

ಆತ್ಮವಿಶ್ವಾಸದ ಮೇಲೆ ನಂಬಿಕೆ

 

ಪುರಷರು ಯಾವಾಗ ತಮ್ಮ ಆತ್ಮ ವಿಶ್ವಾಸದ ಮೇಲೆ ನಂಬಿಕೆ ಬೆಳೆಸಿಕೊಳ್ಳುತ್ತಾರೆ ಅವಾಗ ಎಲ್ಲರ ಮಧ್ಯೆಯೂ ಅವರು ಚೆನ್ನಾಗಿ ಬಾಳುತ್ತಾರೆ. ಹುಡುಗಿಯರಾಗಲೀ ಅಥವಾ ಹೆಂಡ್ತಿಯರಾಗಲೀ ಅವರ ಮೇಲೆ ಯಾವುದೇ ಅನುಮಾನ ಪಡುವುದಿಲ್ಲ. ಇಂತಹ ಮನೋಬಾವುಳ್ಳ ಗಂಡಸರನ್ನ ಕಂಡ್ರೆ ಮಹಿಳೆಯರಿಗೆ ಅತೀ ಹೆಚ್ಚು ಪ್ರೀತಿ.

 

ಕಲಾತ್ಮಕ ವ್ಯಕ್ತಿ

 

ಕಲಾತ್ಮಕ ವ್ಯಕ್ತಿ ಬಹಳ ಸಹಜ ಗುಣ ಮತ್ತು ಪ್ರತಿ ಸಮಯ ಗೆಲುವು ಕಾಣುತ್ತಾನೆ. ಮಹಿಳೆಯರನ್ನ ಖುಷಿಯಾಗಿಡಲು ತಮ್ಮ ಕಲೆಯನ್ನ ಬಳಸಲು ಅಂತಹ ಪುರಷರು ಬಹಳ ಇಷ್ಟಪಡುತ್ತಾರೆ. ಇದು ಮಹಿಳೆಯರಿಗೆ ಬಹಳ ಇಷ್ಟವಾಗುತ್ತೆ. ಅದರಿಂದ ಇಂತಹ ವ್ಯಕ್ತಿಗಳು ಸಹಜವಾಗಿಯೇ ಹುಡುಗಿಯರಿಗೆ ಇಷ್ಟವಾಗುತ್ತೆ.

 

ವಿದೇಶಿ ಟ್ಯಾಲೆಂಟ್‌

 

ಹೊರ ದೇಶದ ಸ್ಟೈಲ್‌ ಮತ್ತು ಭಾಷೆಯ  ಶೈಲಿಯೂ ವಿಭಿನ್ನವಾಗಿದ್ದರೆ ಸಾಕು ಹುಡುಗಿಯರು ಹಾಗೇ ಒಪ್ಪಿಕೊಳ್ತಾರೆ. ಇಂತಹ ಪುರಷರ ವ್ಯವಹಾರ ಬಹಳ ವಿಭಿನ್ನ ಮತ್ತು ಆಕರ್ಷಕವಾಗಿರುವುದು ಇದಕ್ಕೆ ಕಾರಣ .

 

ವಿಚಾರವಂತರು

 

ಮಹಿಳೆಯರಿಗೆ ಮನೆಯ ಬಾಗಿಲು ತೆಗೆದು, ಕುರ್ಚಿಯನ್ನ ಹಾಕಿ ರಾಣಿ ತರಹ ನೋಡಿಕೊಳ್ಳುವವರನ್ನ ಕಂಡ್ರೆ ಬಹಳ ಇಷ್ಟ. ಇನ್ನು ಹೋದಲ್ಲಿ ಬಂದಲ್ಲಿ ಹುಡುಗರೇ ಪ್ರವಾಸದ ಬಿಲ್‌ ಕೊಟ್ರಂತು ಸಾಕು ಅವರನ್ನ ಬಿಡಲಾರದೇ ಹಾಗೇ ಒಪ್ಪಿಕೊಳ್ತಾರೆ. ಸದ್ಯ ಹುಡುಗಿಯರು ಈ ತರಹದ ಹುಡುಗರನ್ನೇ ಅತಿ ಹೆಚ್ಚಾಗಿ ಹುಡ್ಕೋದು.

 

ಪ್ರಣಯ ವ್ಯಕ್ತಿ

 

ಹುಡುಗಿಯರಿಗೆ ಚಾಕ್ಲೇಟ್‌ ಕೊಡಿಸುವುದು, ವಾಯು ವಿಹಾರಕ್ಕೆ ಕರೆದುಕೊಂಡು ಹೋಗುವುದು, ಮೂವಿಗೆ ಹೋಗುವುದು, ಸದಾ ಗೆಳತಿ ಬಗ್ಗೆ ಆಲೋಚನೆ ಮಾಡುವ, ಮಾತನಾಡುವ ಕ್ಲಾಸಿಕ್‌‌ ರೋಮ್ಯಾನ್ಸ್‌ ಉಳ್ಳ ಪುರಷರನ್ನ ಮಹಿಳೆಯರು ಬಹಳ ಇಷ್ಟ ಪಡುತ್ತಾರೆ.

 

ಎಂಜಾಯ್‌ ಮಾಡೋ ಹುಡುಗರು

 

ಕೊನೆಯದಾಗಿ ಹುಡುಗಿಯರಿಗೆ ಎಂಜಾಯ್‌ ಮಾಡುವ ಹುಡುಗರು ಸಹ ತುಂಬಾ ಇಷ್ಟವಾಗುತ್ತಾರೆ. ಏಕೆಂದರೆ ಅವರು ಯಾವುದೇ ರೀತಿವ ಒತ್ತಡ ಹಾಕಿಕೊಳ್ಳುವುದಿಲ್ಲ. ಇನ್ನು ಒತ್ತಡವನ್ನ ಯಾವ ರೀತಿ ನಿಭಾಯಿಸಬೇಕೆಂಬುವುದು ಅವರಿಗೆ ತಿಳಿದಿರುತ್ತೆ ಅಂತಾ ಹೇಳ್ತಾರೆ ನಾರಿಯರು. ಇಂತವರು ಅರ್ಧದಷ್ಟು ಮಹಿಳೆಯರಿಗೆ ಬಹಳ ಇಷ್ಟವಾಗ್ತಾರೆ.