ದೊಡ್ಡ ಸುದ್ದಿ

ರಶ್ದಿಯ ಬೆಡ್ರೂಂ ಸಿಕ್ರೇಟ್ ಹಂಚಿಕೊಂಡ ಲಕ್ಷ್ಮಿ

ನವದೆಹಲಿ:  ನೋಬೆಲ್ ಪ್ರಶಸ್ತಿ ವಿಜೇತ ಸಲ್ಮಾನ್ ರಶ್ದಿ ಅವರ ಮಾಜಿ  ಪತ್ನಿ ಇಂಡೋ ಅಮೆರಿಕನ್ ರೂಪದರ್ಶಿ ಪದ್ಮ ಲಕ್ಷ್ಮಿ ಲವ್ , ಲಾಸ್ ಆ್ಯಂಡ್  ವಾಟ್ ವಿ ಏಟ್ (‘Love, Loss And What We Ate’) ಎಂಬ ಆತ್ಮಕತೆ ಬರೆದಿದ್ದು, ಅದರಲ್ಲಿ ರಶ್ದಿ ಅವರ ಖಾಸಗಿ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು. ಅಷ್ಟೇ ಅಲ್ಲ ಕಾಲ ಕಳೆದಂತೆ ಸದಾ ತನ್ನ ಕಡೆ ಗಮನ ಹರಿಸಬೇಕೆಂದು ಬಯಸುವ ಗಂಡ ಅವರಾಗಿದ್ದರು ಎಂದು  ಪದ್ಮ ಲಕ್ಷಿ ಬರೆದುಕೊಂಡಿದ್ದಾರೆ.