ದೊಡ್ಡ ಸುದ್ದಿ ವಾಣಿಜ್ಯ ಸುದ್ದಿ

ಸಿಂಡಿಕೇಟ್ ಬ್ಯಾಂಕ್ ಮೇಲೆ ಸಿಬಿಐ ದಾಳಿ

ನವದೆಹಲಿ: ಒಂದು ಸಾವಿರ ಕೋಟಿ ರುಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ  ತಂಡ ಮಂಗಳವಾರ ಸಿಂಡಿಕೇಟ್ ಬ್ಯಾಂಕ್ ನ ದೆಹಲಿ, ಜೈಪುರ ಹಾಗೂ ಉದಯಪುರ ಶಾಖೆಗಳ ಮೇಲೆ ಮಾಡಿದೆ.

ಒಂದು ಸಾವಿರ ಕೋಟಿ ರುಪಾಯಿ ಮೊತ್ತದ ಚೆಕ್ ಗಳನ್ನು ನಕಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈ ಮೂರು ನಗರಗಳಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನ ಇತರೆ 10 ಶಾಖೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನೀಡಲು ಸಿಂಡಿಕೇಟ್ ಬ್ಯಾಂಕ್ ನಿರಾಕರಿಸಿದೆ.