ನಮ್ಮ ಬಗ್ಗೆ

ಬದಲಾಗುತ್ತಿರುವ ಜಗತ್ತಿಗೆ ಹೊಸ ಸೆಳೆಯ ಆವಿಷ್ಕಾರ
ಆನ್‌ಲೈನ್ ಅಂಗಳದಲ್ಲಿ ನಾವು ಹೊಸಬರಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಡೆಕ್ಕನ್ ಟೈಮ್. ಕಾಮ್ ಆಂಗ್ಲ ಭಾಷೆಯಲ್ಲಿ ನಮ್ಮ ಪ್ರಯಾಣ ಸಾಗಿದೆ. ವಿಶ್ವದ ನಾನಾ ದೇಶಗಳಲ್ಲಿರುವ ಡೆಕ್ಕನ್ ಟೈಮ್ ಓದುಗರು ನಮ್ಮ ವಿಚಾರ ಧಾರೆಗಳನ್ನು ಮೆಚ್ಚಿಕೊಂಡು ನಮ್ಮನ್ನು ಸಾಕಷ್ಟು ಬೆಳೆಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ನಾವು ಕಾಣಿಸಿಕೊಂಡು ನಂತರದ ದಿನಗಳಲ್ಲಿ ಇತರ ವಿಚಾರಗಳನ್ನು ಕೂಡ ಪೋಣಿಸಿಕೊಂಡು ಡೆಕ್ಕನ್ ಟೈಮ್. ಕಾಮ್ ಕಟ್ಟಿಕೊಟ್ಟಿದ್ದೇವೆ. ಇಂದು ದೇಶ ವಿದೇಶದಲ್ಲಿರುವ ಅದರಲ್ಲೂ ಮುಖ್ಯವಾಗಿ ಶಿಕ್ಷಣ ರಂಗದಲ್ಲಿನ ಮಾಹಿತಿಗಳನ್ನು ಹಂಚುವ ವಿಚಾರದಲ್ಲಿ ನಾವು ಮುಂದೆ ಸಾಗಿ ಬಂದಿದ್ದೇವೆ.
ಕರುನಾಡಿನಲ್ಲಿ ಹುಟ್ಟಿ ಬೆಳೆದ ಈ ಡೆಕ್ಕನ್ ಟೈಮ್. ಕಾಮ್ ಆಂಗ್ಲ ಭಾಷೆಯ ಜತೆಯಲ್ಲಿ ಕನ್ನಡ ಭಾಷೆಯಲ್ಲೂ ನೀಡುವ ಪ್ರಯತ್ನ ಈಗ ಸಾಗಿದೆ. ಉತ್ಸಾಹಿ ಪತ್ರಕರ್ತರು ಹಾಗೂ ಎನ್‌ಜಿಒಗಳ ನೆರವಿನಿಂದ ಸಾಗುವ ಈ ಡೆಕ್ಕನ್ ಟೈಮ್. ಕಾಮ್ ಕನ್ನಡದಲ್ಲಿ ವಿಶೇಷವಾಗಿ ಶಿಕ್ಷಣ, ಉದ್ಯೋಗ ಹಾಗೂ ಸುದ್ದಿಯ ವಿಚಾರಗಳು ನಿರಂತರವಾಗಿ ಪ್ರಕಟವಾಗಲಿದೆ. ಡೆಕ್ಕನ್ ಟೈಮ್. ಕಾಮ್ ಕನ್ನಡ ಕರುನಾಡಿನ ಮುಖ್ಯ ಆನ್‌ಲೈನ್ ಮಾಧ್ಯಮಗಳಲ್ಲಿ ಒಂದಾಗಲಿ ಹಾಗೂ ನಿಮ್ಮ ನಿರಂತರ ಪ್ರೋತ್ಸಾಹ ಮಾತುಗಳು ನಮ್ಮ ಜತೆಗಿರಲಿ.
ಡೆಕ್ಕನ್ ಟೈಮ್. ಕಾಮ್ ಎನ್ನುವುದು ಡೆಕ್ಕನ್ ಟೈಮ್ ಮಿಡಿಯಾ ನೆಟ್‌ವರ್ಕ್ ಎನ್ನುವ ಸಂಸ್ಥೆಯಡಿಯಲ್ಲಿ ಕೆಲಸ ಮಾಡುವ ತಾಣ. ಈಗ ಸಧ್ಯಕ್ಕೆ ಆಂಗ್ಲ ಹಾಗೂ ಕನ್ನಡದಲ್ಲಿ ಮಾತ್ರ ಈ ತಾಣ ಕೆಲಸ ಮಾಡುತ್ತಿದೆ. ಉಳಿದಂತೆ ದೇಶದ ನಾನಾ ಭಾಷೆಗಳಲ್ಲೂ ತರುವ ಕೆಲಸ ಕೂಡ ನಡೆಯುತ್ತಿದೆ. ನಿಮ್ಮ ಸಲಹೆ ಸೂಚನೆಗಳು ನಿರಂತರವಾಗಿ ನಮ್ಮ ಜತೆಗಿರಲಿ.

ಪ್ರಧಾನ ಸಂಪಾದಕರು
ಡೆಕ್ಕನ್ ಟೈಮ್. ಕಾಮ್ ಕನ್ನಡ